ಬೆಂಗಳೂರು, ಜೂನ್ 11, 2020 (www.justkannada.in): ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕ ಎಸ್‌ಎಸ್ ರಾಜಮೌಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಮೌಳಿ ಅವರ ಫೇಸ್‌ಬುಕ್ ಪೋಸ್ಟ್‌ವೊಂದಕ್ಕೆ ರಾಜೇಂದ್ರ ಸಿಂಗ್ ಬಾಬು ಕಾಮೆಂಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಥಿಯೇಟರ್‌ಗಳಲ್ಲಿ ಕನಿಷ್ಠ ಸ್ಥಿರ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಅವರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು ಎಂದು ರಾಜಮೌಳಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಜೇಂದ್ರ ಸಿಂಗ್ ಬಾಬು, ಕೊರೊನಾ ಸಮಯದಲ್ಲೂ ಕರ್ನಾಟಕದ ಜನರಿಗೆ ಸಹಾಯ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ನಿಮ್ಮ ಸಿನಿಮಾ ರಿಲೀಸ್ ಆದ ವೇಳೆ ಪ್ರತಿಭಟನೆ ನಡೆದಾಗ ಮಾತ್ರ ನಾನು ಕರ್ನಾಟಕದವನು, ರಾಯಚೂರಿನವನು ಅಂತ ನಾಟಕ ಮಾಡುತ್ತೀಯ, ಅಲ್ಪ ಸ್ವಲ್ಪ ಕನ್ನಡ ಮಾತನಾಡಿ ತಪ್ಪಿಸಿಕೊಳ್ಳುತ್ತೀಯಾ. ಡಾ.ರಾಜ್‌ಕುಮಾರ್ ಅವರ ಸಿನಿಮಾಗಳಿಂದ ಕಥೆಯನ್ನು ಕದ್ದಿರುವೆ. ‘ರಾಜ ನನ್ನ ರಾಜ’, ‘ಮಯೂರ’ ಸಿನಿಮಾ ಹಾಗೂ ಕನ್ನಡ ಕಾದಂಬರಿ ಕಥೆಗಳನ್ನೂ ಕದ್ದಿರುವೆ’ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.