‘’ಹೋರಾಟ ಯಾಕೆ ಬೇಕು ಅಂತ ಕೇಳೋದಲ್ಲ’’ : ಸಿದ್ದರಾಮಯ್ಯಗೆ ಎಚ್.ವಿಶ್ವನಾಥ್ ತಿರುಗೇಟು…!

ಮೈಸೂರು,ಡಿಸೆಂಬರ್,29,2020(www.justkannada.in) :  ರಾಜಕೀಯ, ಔದ್ಯೋಗಿಕ, ಶೈಕ್ಷಣಿಕವಾಗಿ ನಾವು ಬೆಳೆಯಬೇಕಿದೆ. ಅದಕ್ಕಾಗಿ ನಮಗೆ ಎಸ್‌ಟಿ ಗೆ ಸೇರಿಸಬೇಕಾಗಿದೆ. ಹೋರಾಟ ಯಾಕೆ ಬೇಕು ಅಂತ ಕೇಳೋದಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.ಕುರುಬರನ್ನು ಎಸ್‌ಟಿಗೆ ಸೇರಿಸಲು ಹೋರಾಟದ ಅಗತ್ಯವಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವಾಲ್ಮೀಕಿ ಸಮುದಾಯ ಎಸ್.ಟಿ.ಗೆ ಸೇರಿತು. ಮೀಸಲಾತಿ ಪರಿಣಾಮವಾಗಿ 15 ಶಾಸಕರು, 3 ಸಂಸದರು ಆಯ್ಕೆಯಾದರು. ಅದು ನಮಗೆ ಬೇಡವೇ? ಎಂದು ಪ್ರಶ್ನಿಸಿದ್ದಾರೆ.

ಹೋರಾಟವಿಲ್ಲದೆ ದೇಶಕ್ಕೆ‌ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲ. ರೈತ,ಕಾರ್ಮಿಕ,ಮಹಿಳಾ…ಹೀಗೆ ಹಲವಾರು ಹೋರಾಟಗಳು ನಡೆದಿವೆ. ಈಗ ಎಸ್‌ಟಿ ಮೀಸಲಾತಿ ಪ್ರಮಾಣ ಶೇ.3 ಇರಬಹುದು. ಮುಂದೆ ಅದು ಶೇ.18, 20 ಅಥವಾ 21 ಆಗಬಹುದು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಲು ಕುರುಬರು ತನು, ಮನ, ಧನ ಅರ್ಪಿಸಿಲ್ಲವೇ?

ಸಿದ್ದರಾಮಯ್ಯ ಅವರು ನಮ್ಮ ಜತೆಗೆ ಇದ್ದಾರೆ. ಯಾಕೆ ವಿರೋಧ ಮಾಡುತ್ತಾರೆ?, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ರಾಜ್ಯಾದ್ಯಂತ ಕುರುಬರು ತನು, ಮನ, ಧನ ಅರ್ಪಿಸಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಹೆಸರಿನಲ್ಲಿ ಯಾರೋ ವಿರೋಧ ಮಾಡುತ್ತಿದ್ದಾರೆ

Why-does-need-fight?-Siddaramaiah-H.Vishwanath...!

ಸಿದ್ದರಾಮಯ್ಯ ಹೆಸರಿನಲ್ಲಿ ಯಾರೋ ವಿರೋಧ ಮಾಡುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣನನ್ನೇ ಬ್ರಿಟಿಷರಿಗೆ ಹಿಡಿದುಕೊಟ್ಟವರು ನಮ್ಮಲ್ಲೇ ಇದ್ದರು. ಅಂತವರು ಯಾರೋ ಇದ್ದೇ ಇರುತ್ತಾರೆ. ಅಂಥವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನಮ್ಮ ಹೋರಾಟ ಅಚಲವಾಗಿದೆ. ಸರ್ಕಾರಕ್ಕೆ ಮುಟ್ಟುವ ಭರವಸೆಯೂ ಇದೆ ಎಂದು ತಿಳಿಸಿದ್ದಾರೆ.

key words : Why-does-need-fight?-Siddaramaiah-H.Vishwanath…!