ಹಾಸನ ,ಜನವರಿ,9,2025 (www.justkannada.in): ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆಂದು ಗಂಡನನ್ನೇ ಹತ್ಯೆ ಮಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆ ಮುಕುಂದೂರು ಹೊಸಳ್ಳಿಯಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ಆನಂದ್ (36) ಹತ್ಯೆಗೀಡಾದ ವ್ಯಕ್ತಿ. ಹರ್ಷಿತ (23) ಎಂಬಾಕೆಯೇ ಗಂಡನನ್ನ ಹತ್ಯೆಗೈದಿರುವ ಪತ್ನಿ. ಹರ್ಷಿತ ತನ್ನ ಬಾವ ಸೋಮಶೇಖರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಈ ಮಧ್ಯೆ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಾನೆಂದು ಬಾವನೊಂದಿಗೆ ಸೇರಿ ಪತಿ ಆನಂದ್ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿ ಮೃತದೇಹವನ್ನು ಹೇಮಾವತಿ ನಾಲೆಗೆ ಬೀಸಾಡಿದ್ದಾಳೆ ಎನ್ನಲಾಗಿದೆ. ನಂತರ ಅದು ಆತ್ಮಹತ್ಯೆಯೆಂದು ಜನರನ್ನು ನಂಬಿಸಲು ಯತ್ನಿಸಿದ್ದು, ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದೀಗ ಪೋಲಿಸ್ ತನಿಖೆಯಿಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಹರ್ಷಿತಾಳನ್ನು ಪೊಲೀಸರು ಬಂಧಿಸಿದ್ದಾರೆ.
key words: Wife, kills ,husband, immoral relationship