ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ: ಇಬ್ಬರು ಪೊಲೀಸರ ವಶಕ್ಕೆ

ಮೈಸೂರು,ಏಪ್ರಿಲ್,19,2025 (www.justkannada.in): ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪ್ರಿಯಕರನ ಜೊತೆ ಸೇರಿ ಪತ್ನಿ ಹತ್ಯೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕೆ.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಹಮದ್ ಷಫಿ ಕೊಲೆಯಾದವರು.  ಪತಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಶಬ್ರಿನ್ ತಾಜ್ , ಪ್ರಿಯಕರ ಅನ್ವರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

12 ವರ್ಷಗಳ ಹಿಂದೆ ಶಬ್ರೀನ್ ಹಾಗೂ ಮಹಮದ್ ಷಫಿ ಮದುವೆಯಾಗಿದ್ದರು. ಈ ಮಧ್ಯೆ ಐದಾರು ವರ್ಷಗಳಿಂದ ಇಬ್ಬರ ಮಧ್ಯೆ ವಿರಸ ಉಂಟಾಗಿ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಶಬ್ರಿನ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದು ಈ ವೇಳೆ ಅನ್ವರ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ.  ಆದರೆ ಈ ಸಂಬಂಧಕ್ಕೆ ಪತಿ ಅಡ್ಡಿ ಹಿನ್ನಲೆ ಪ್ಲಾನ್ ಮಾಡಿ ಪತಿಯನ್ನು ಕೊಲ್ಲಲು  ಶಬ್ರೀನ್ ಪ್ರಿಯಕರನಿಗೆ ಹೇಳಿದ್ದು, ಪತಿ ಮಹಮದ್ ಮಲಗಿದ್ದ ವೇಳೆ ಮೊಬೈಲ್ ಜಾರ್ಜ್ ವೈರ್ ಕುತ್ತಿಗೆಗೆ ಬಿಗಿದು ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಶವಕ್ಕೆ ಸ್ನಾನ ಮಾಡಿಸುವ ವೇಳೆ ಕುತ್ತಿಗೆಯಲ್ಲಿ ಗುರುತು ಪತ್ತೆಯಾಗಿದ್ದು, ತಕ್ಷಣ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ  ಪತ್ನಿ ಶಬ್ರಿನ್ ತಾಜ್ , ಪ್ರಿಯಕರ ಅನ್ವರ್  ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: wife, Murder,  Husband, Two arrested, Mysore