“ಕಾಡಾನೆ ದಾಂಧಲೆ 15 ಲಕ್ಷ ರೂ. ಮೌಲ್ಯದ ಬೆಳೆ ನಾಶ”

ಮೈಸೂರು,ಫೆಬ್ರವರಿ,18,2021(www.justkannada.in) : ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಾಳೇತಿಮ್ಮನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಂಧಲೆಯಿಂದ 15 ಲಕ್ಷ ರೂ. ನಷ್ಟು ಬೆಳೆ ನಾಶವಾಗಿದೆ.

jk

ರೈತ ಮಹಿಳೆ ಸೀತಮ್ಮ ಅವರ ಜಮೀನಿಗೆ ನುಗ್ಗಿದ ಕಾಡಾನೆ ಬೆಳೆಯನ್ನು ಸಂಪೂರ್ಣ ನಾಶಪಡಿಸಿದೆ. ಆನೆದಾಳಿಯಿಂದ ಮೂರು ಎಕರೆ ಬಾಳೆ, ಎರಡು ಎಕರೆ ಗೆಣಸು, 200 ತೆಂಗಿನ ಮರ, 200 ಅಡಿಕೆ ಮರ ನಾಶವಾಗಿದ್ದು, ಸುಮಾರು 15 ಲಕ್ಷ ರೂ. ನಷ್ಟು ಬೆಳೆ ನಾಶವಾಗಿದೆ ಎಂದು ತಿಳಿದು ಬಂದಿದೆ.

wild elephant-Attack-15 lakhs-Destroy-crop-value 
ಸಾಂದರ್ಭಿಕ ಚಿತ್ರ

ಮುತ್ತೂರು ಅರಣ್ಯ ವಲಯದಿಂದ ಆನೆಗಳ ಆಗಮನ

ಪ್ರತಿ ಬಾರಿಯೂ ಆನೆಗಳು ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿರುವ ಕುರಿತು ರೈತರು ಬೇಸತ್ತಿದ್ದಾರೆ. ಮುತ್ತೂರು ಅರಣ್ಯ ವಲಯದಿಂದ ಆನೆಗಳು ಬರುತ್ತಿದ್ದು, ಆ ಭಾಗದಲ್ಲಿ ತಡೆಗೋಡೆ ಸಮರ್ಪಕವಾಗಿಲ್ಲ. ಅದನ್ನು ದುರಸ್ತಿ ಮಾಡುವಂತೆ ರೈತರು ಮನವಿ ಮಾಡಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 

key words : wild elephant-Attack-15 lakhs-Destroy-crop-value