ಮೈಸೂರು, ಆಗಸ್ಟ್ 29, 2021: ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಭದ್ರಪಡಿಸಲು ಕ್ರಮ ಕೈಗೊಂಡಿದೆ.
ಡಿಜಿಐಜಿಪಿ ಪ್ರವೀಣ್ ಸೂದ್ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಅತ್ಯಾಚಾರಿಗಳ ವಿಚಾರಣೆ ತನಿಖೆ ಚುರುಕುಗೊಳಿಸುವ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ.
ನಿನ್ನೆಯಿಂದ ಮೈಸೂರಿನಲ್ಲೆ ಇರುವ ಪ್ರವೀಣ್ ಸೂದ್. ಮೈಸೂರಿನ ರ್ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ನಡೆಯುತ್ತಿರುವ ಸಭೆ ನಡೆಸಲಾಗುತ್ತಿದೆ.
ಎಡಿಜಿಪಿ ಪ್ರತಾಪ್ ರೆಡ್ಡಿ, ದಕ್ಷಿಣ ವಲಯದ ಐಜಿಪಿ ಮಧುಕರ್ ಪವಾರ್, ನಗರ ಪೋಲಿಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರು ಎಸ್ಪಿ ಚೇತನ್, ಡಿಸಿಪಿ ಪ್ರವೀಣ್, ಗೀತಾ ಪ್ರಸನ್ನ ಸೇರಿದಂತೆ ಪ್ರಮುಖ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಮೈಸೂರಿನಲ್ಲಿ ಹೆಚ್ಚುತ್ತಿರುವ ಕ್ರೈಂ ರೇಟ್ ಗೆ ಬ್ರೇಕ್ ಹಾಕಲು ಪ್ರವೀಣ್ ಸೂದ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಮೈಸೂರಿನಲ್ಲಿ ನಡೆದಿರುವ ಇತ್ತೀಚಿಗ ಕ್ರೈಂ ಇನ್ಸಿಡೆಂಟ್ ಬಗ್ಗೆ ಮಾಹಿತಿ ಪಡೆದ ಡಿಜಿಐಜಿಪಿ, ಮತ್ತೆ ಇಂತಹ ಘಟನೆ ನಡೆದರೆ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮತ್ತಷ್ಟು ಕಾನೂನು ಸುವ್ಯವಸ್ಥೆ ಭದ್ರಪಡಿಸಲು ಸೂಚನೆ ನೀಡಿದ್ದಾರೆ.