ಹಾಸನ, ಜನವರಿ,19,2024(www.justkannada.in): ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ನಾನು ಅಯೋಧ್ಯೆಗೆ ಭೇಟಿ ನೀಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಕುಟುಂಬ ಸಹಿತವಾಗಿ ನಾನು ಅಯೋಧ್ಯೆ ರಾಮ ಮಂದಿರಕ್ಕೆ ಹೋಗುತ್ತೇನೆ. ನಾನು, ನನ್ನ ಪತ್ನಿ, ಮಗ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಪತ್ನಿ ಹಾಗೂ ನಿಖಿಲ್ ಹೋಗುತ್ತೇವೆ. ಜನವರಿ 22ಕ್ಕೆ ವಿಶೇಷ ವಿಮಾನ ಮಾಡಿದ್ದಾರೆ. ಅದರಲ್ಲೆ ಅಯೋಧ್ಯೆಗೆ ಹೋಗುತ್ತೇವೆ ಎಂದು ತಿಳಿಸಿದರು.
ಇನ್ನು ರಾಜ್ಯ ಸರ್ಕಾರ ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಒಕ್ಕಲಿಗರಿಗೆ ಕೊಟ್ಟಿದ್ದ ಮೀಸಲಾತಿ ಕೋಟಾ ಕಡಿಮೆ ಮಾಡಿ ಮುಸ್ಲಿಂರಿಗೆ ಕೊಟ್ಟಿದ್ದು ನಾನು ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಂವಿದಾನ ಕೊಟ್ಟ ಮೀಸಲಾತಿ ಭರ್ತಿಮಾಡಲು ಆಗದಿದ್ದಾಗ ಉದ್ಯೋದದಲ್ಲಿ ಪದೋನ್ನತಿ ಬಗ್ಗೆ ಜಾರಿ ಮಾಡಲು ಕೇಳಿದರು. ಶೇಕಡಾ 15 ಎಸ್ ಸಿಗಳಿಗೆ, ಶೇಕಡಾ 3 ಎಸ್. ಟಿಗಳಿಗೆ ಮೀಸಲಾತಿ ಇತ್ತು. ಆದರೆ ಉದ್ಯೋಗದಲ್ಲಿ ಈ ಮೀಸಲಾತಿ ಪ್ರಮಾಣ ತಲುಪದೆ ಹೋದಾಗ ನಾನು ಅದನ್ನ ಶೇಕಡಾ 15 ರಿಂದ 18ಕ್ಕೆ ಮತ್ತು ಶೇಕಡಾ 3 ರಿಂದ 5ಕ್ಕೆ ಏರಿಸಿದೆ. ಇದೆಲ್ಲವನ್ನೂ ಕೂಡ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾಡಿದ್ದು ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.
Key words: Will- visit –Ayodhya- with- family – Former PM – HD Deve Gowda.