ವಿಂಗ್ ಕಮಾಂಡರ್ ಮೇಲೆ ಹಲ್ಲೆ ಕೇಸ್ ಗೆ ಟ್ವಿಸ್ಟ್:  ಬೈಕ್ ಸವಾರನ ಮೇಲೆಯೇ ಹಲ್ಲೆ ಮಾಡಿದ್ದ ಅಧಿಕಾರಿ ವಿರುದ್ದ FIR

ಬೆಂಗಳೂರು,ಏಪ್ರಿಲ್,22,2025 (www.justkannada.in):  ಬೆಂಗಳೂರಿನಲ್ಲಿ ನಿನ್ನೆ ವಿಂಗ್ ಕಮಾಂಡರ್ ಶಿಲಾದಿತ್ಯ  ಮೇಲೆ  ಹಲ್ಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರೇ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೈಕ್ ಸವಾರ ವಿಕಾಸ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ನಂತರ ತನ್ನ ಮೇಲೆಯೇ ಹಲ್ಲೆ ಮಾಡಿರುವುದಾಗಿ ಕಥೆ ಕಟ್ಟಿದ್ದು ಇದೀಗ ಸಿಸಿ ಟಿವಿ ಪರಿಶೀಲಿಸಿದಾಗ ವಿಂಗ್ ಕಮಾಂಡರ್ ನ ಅಸಲಿಮುಖ ಬಯಲಾಗಿದೆ.

ಬೈಕ್ ಸವಾರ ವಿಕಾಸ್ ಪ್ರತಿ ದೂರಿನ ಮೇರೆಗೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿರುದ್ಧ ಬೈಯಪ್ಪನಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.ಮೊದಲು ವಿಂಗ್ ಕಮಾಂಡರ್ ಆದಿತ್ಯ ಬೋಸ್ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ಕೆಳಗೆ ಬೀಳಿಸುವ ವಿಡಿಯೋ ವೈರಲ್ ಆಗಿದೆ.

ಬೋಸ್ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು ಮತ್ತು ಸ್ಥಳೀಯ ನಿವಾಸಿಯೊಬ್ಬರು ತನ್ನ ಮತ್ತು ಅವರ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಇದೀಗ  ಬೋಸ್ ಅವರೇ ಬೈಕ್ ಸವಾರ ವಿಕಾಸ್ ಮೇಲೆ ಹಲ್ಲೆ ನಡೆಸಿರುವ  ಸಿಸಿ ಟಿವಿ ದೃಶ್ಯ ವೈರಲ್ ಆಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಕರವೇ ಅಧ್ಯಕ್ಷ  ಪ್ರವೀಣ್ ಶೆಟ್ಟಿ,  ವಿಂಗ್ ಕಮಾಂಡ ಶಿಲಾದಿತ್ಯ ಬೋಸ್ ರನ್ನ ಬಂಧಿಸಬೇಕು. ಸೇನೆಯ ಗೌರವ ಹಾಳು ಮಾಡಿದ್ದಾರೆ. ಶಿಲಾದಿತ್ಯ ಬೋಸ್ ರನ್ನು ಸೇನೆಯಿಂದ ವಜಾಗೊಳಿಸಬೇಕು ರಾಜ್ಯದಲ್ಲಿ ಹೊರ ರಾಜ್ಯದವರಿಂದ ದಬ್ಬಾಳಿಕೆ ಹೆಚ್ಚಾಗಿದೆ. ವಿಕಾಸ್ ಗೆ ಚಿಕಿತ್ಸೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Key words: Wing Commander, assult, case, Twist , FIR