Scholarship from Wipro organization for economically backward girl students who have studied 10th standard in government school and second PUC in government college. 24 thousand per annum for selected female students. Scholarship will be provided. Those who have studied SSLC and PUC in Govt School, economically backward can apply.
ಮೈಸೂರು, ಸೆ,18,2024: (www.justkannada.in news) ಸರಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಆರ್ಥಿಕ ಹಿಂದುಳಿದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾದ ವಿಪ್ರೋ ಸಂಸ್ಥೆ.
ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ ಹಾಗೂ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ವಿಪ್ರೋ ಸಂಸ್ಥೆ ವತಿಯಿಂದ ವಿದ್ಯಾರ್ಥಿ ವೇತನ.
ದ್ವಿತೀಯ ಪಿಯುಸಿ ಉತ್ತೀರ್ಣಗೊಂಡು ಯಾವುದಾದರೂ ಪದವಿ ಕಾಲೇಜಿನಲ್ಲಿ ಅಥವಾ ವೃತ್ತಿಪರ ಶಿಕ್ಷಣ ಕೋರ್ಸ್ ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಆದರೆ ವಿದ್ಯಾರ್ಥಿನಿಯರು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಹಾಗೂ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರಬೇಕು. ಶೇಕಡಾವಾರು ಅಂಕವನ್ನು ಅರ್ಹತೆಯಾಗಿ ಪರಿಗಣಿಸುವುದಿಲ್ಲ. ಉತ್ತೀರ್ಣಕ್ಕೆ ಬೇಕಾಗಿರುವ ಅಂಕ ತಗೆದುಕೊಂಡಿದ್ದರೂ ಸಾಕು.
ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 24 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುವುದು. ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವ್ಯಾಸಂಗ ಮಾಡಿದ, ಆರ್ಥಿಕವಾಗಿ ಹಿಂದುಳಿದವರು ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿ ವೇತನವನ್ನು ಶೇ. 60ರಷ್ಟು ಭಾಗ ಮಾನವಿಕ ವಿಷಯ, ಕಲಾ ವಿಷಯ, ವಿಜ್ಞಾನ ವಿಷಯಗಳಲ್ಲಿ ಪದವಿ ಅಭ್ಯಾಸ ಮಾಡುವವರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ. ಉಳಿದ ಶೇ. 40ರಷ್ಟನ್ನು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿ ಪಡೆಯುವವರನ್ನು ಪರಿಗಣಿಸಲಾಗುತ್ತದೆ.
ಮಾನವಿಕ ವಿಷಯಗಳಲ್ಲಿ ಹೆಚ್ಚು-ಹೆಚ್ಚು ವಿದ್ಯಾರ್ಥಿನಿಯರು ಪ್ರವೇಶ ಪಡೆಯುವುದರಿಂದ ಹೆಚ್ಚು ಜನರಿಗೆ ಈ ಸೌಲಭ್ಯ ದೊರಕುವಂತೆ ಆಗಲಿ ಎನ್ನುವ ಉದ್ದೇಶವನ್ನು ವಿಪ್ರೋ ಸಂಸ್ಥೆ ಹೊಂದಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆ ಸಿಇಒ ತಿಳಿಸಿದರು.
ಪ್ರಸಕ್ತ ವರ್ಷ 1,500 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ಪೈಕಿ ಮೈಸೂರು ಜಿಲ್ಲೆಯ 380 ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಲು ಉದ್ದೇಶಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಮೊ. 74116 54395, 73378 35166 ಸಂಪರ್ಕಿಸಬಹುದು.
key words: Wipro Scholarship, girls who studied in government schools and colleges.
SUMMARY:
Scholarship from Wipro organization for economically backward girl students who have studied 10th standard in government school and second PUC in government college. 24 thousand per annum for selected female students. Scholarship will be provided. Those who have studied SSLC and PUC in Govt School, economically backward can apply.