BREAKING NEWS: CBI ಪೂರ್ಣ ಅಧಿಕಾರ ಹಿಂಪಡೆದ ರಾಜ್ಯ ಸರಕಾರ .

 

Delhi Police Establishment Act withdrawn. There are serious allegations against the central government. Allegations that the rules are not applied. So we have withdrawn this free opportunity.

ಬೆಂಗಳೂರು, ಸೆ.26,2024: (www.justkannada.in news)  ದೆಹಲಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಆ್ಯಕ್ಟ್ ವಾಪಸ್. ಕೇಂದ್ರ ಸರ್ಕಾರದ ಮೇಲೆ ಗಂಭೀರ ಆರೋಪವಿದೆ. ನಿಯಮಗಳ ಅನ್ವಯ ಮಾಡುವುದಿಲ್ಲ ಎಂಬ ಆರೋಪ. ಹಾಗಾಗಿ ಈ ಮುಕ್ತ ಅವಕಾಶ ವಾಪಸ್ ಪಡೆದಿದ್ದೇವೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆ. ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್.

ಸಿಎಂ ಮೇಲೆ ತನಿಖೆಗೆ ಅವಕಾಶ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅದರ ಅಗತ್ಯವಿಲ್ಲ. ನಾವು ತೆಗೆದುಕೊಂಡ ನಿರ್ಧಾರ ಸ್ಪಷ್ಟವಾಗಿದೆ. ಸಿಬಿಐ ಮಿಸ್ ಯೂಸ್ ಆಗ್ತಿದೆ ಎಂಬ ಆರೋಪವಿದೆ. ಹಾಗಾಗಿ ಇದನ್ನ ವಾಪಸ್ ಪಡೆದಿದ್ದೇವೆ. ಸಚಿವ ಹೆಚ್.ಕೆ.ಪಾಟೀಲ್‌ ಸಮರ್ಥನೆ.

ಅಪಾಯ ಊಹಿಸಿಲ್ಲ:

ವಾಲ್ಮೀಕಿ ಪ್ರಕರಣ ಸಿಬಿಐಗೆ ಕೊಡುವ ವಿಚಾರ, ಹಾಗಾಗಿ ವಾಪಸ್ ಪಡೆಯಲಾಗಿದ್ಯಾ ಎಂಬ ಪ್ರಶ್ನೆ. ಅಂತಹ ಸಂದರ್ಭ ಈಗಿಲ್ಲ. ಮುಂದಿನ ಅಪಾಯವನ್ನೇನು ನಾವು ಊಹಿಸಿಲ್ಲ. ಊಹಿಸಿ ಈ ನಿರ್ಧಾರ ತೆಗೆದುಕೊಂಡಿಲ್ಲ.

ಸಿಬಿಐ ಪೂರ್ವಾಗ್ರಹ ಪೀಡಿತವಾಗಿ ಕೆಲಸ ಮಾಡ್ತಿದೆ. ಎಲೆಕ್ಷನ್ ನಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಒಂದು ಪಾರ್ಟಿಯ ಪರವಾದ ನಿಲುವು ಗೊತ್ತಾಗಿದೆ. ಕೇಂದ್ರ ಸರ್ಕಾರ . ಯಾವುದನ್ನ ದುರ್ಬಳಕೆ ಮಾಡಿಕೊಳ್ತಿದೆ. ಆ ಎಲ್ಲವೂ ಪೂರ್ವಾಗ್ರಹ ಪೀಡಿತವೇ.

ರಾಜಭವನದ ಮುಖ್ಯಸ್ಥ ಗೂಬೆ ಕೂರಿಸ್ತಾರೆ, ಸರ್ಕಾರದ ಮೇಲೆಯೇ ಗೂಬೆ ಕೂರಿಸ್ತಾರೆ. ಇದನ್ನ ನೋಡಿದ್ರೆ ನಿಮಗೇ ಗೊತ್ತಾಗುತ್ತದೆ ಎಂದ ಸಚಿವ ಹೆಚ್ ಕೆ ಪಾಟೀಲ್.

ಮೊದಲು ಸಿಬಿಐಗೆ ಫುಲ್‌ ಪರ್ಮಿಷನ್ ಇತ್ತು . ಅದನ್ನ ಈಗ ನಾವು ವಾಪಸ್ ಪಡೆದಿದ್ದೇವೆ. ಇದರಿಂದ ಭಯ ಯಾರಿಗೂ ಇಲ್ಲ. ಭಯ ಹುಟ್ಟಿಸಲು ಮಿಸ್ ಯೂಸ್ ಆಗಬಾರದೆಂದು ವಾಪಸ್ ಪಡೆದಿದ್ದೇವೆ ಎಂದ ಸಚಿವ ಹೆಚ್.ಕೆ.ಪಾಟೀಲ್.

ಸ್ನೇಹಮಯಿ ಕೃಷ್ಣ ಸಿಬಿಐಗೆ ಕೊಡುವಂತೆ ಡಿಮ್ಯಾಂಡ್ ವಿಚಾರ, ಕೊಡುವುದಕ್ಕೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಹೆಚ್.ಕೆ.ಪಾಟೀಲ್.

KEY WORDS: CBI biased, karnataka state govt, withdraws, full powers, to CBI, H K Patil

SUMMAY: 

CBI biased, state govt withdraws full powers: H K Patil

Delhi Police Establishment Act withdrawn. There are serious allegations against the central government. Allegations that the rules are not applied. So we have withdrawn this free opportunity.

H.K. Patil clearly stated that the demand by Snehamayi Krishna, to hand over the MUDA scandal to the CBI will not be fulfilled