ಹುಬ್ಬಳ್ಳಿ,ಫೆಬ್ರವರಿ,27,2021(www.justkannada.in): ಕಾಂಗ್ರೆಸ್ ನಾಯಕರ ಹೆಸರಲ್ಲಿ ಲೋನ್ ಕೊಡಿಸುವುದಾಗಿ ಹೇಳಿ ಜನಸಾಮಾನ್ಯರಿಗೆ ಮಹಿಳೆಯೊಬ್ಬರು ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ-ಧಾರವಾಡದ ಪೂರ್ಣಿಮಾ ಸವದತ್ತಿ ಎಂಬ ಮಹಿಳೆಯೇ ವಂಚನೆ ಮಾಡಿರುವುದು. ಈಗೆ ಕಾಂಗ್ರೆಸ್ ಕಾರ್ಯಕರ್ತೆ ಎಂದು ಹೇಳಲಾಗುತ್ತಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಪ್ಪು ಹಣದಲ್ಲಿ ಲೋನ್ ಕೊಡಿಸುವುದಾಗಿ ಹೇಳಿ ಜನರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ನಾಯಕರ ಹೆಸರು ಹೇಳಿ ವಿದ್ಯಾರ್ಥಿ ಲೋನ್, ಹೋಮ್ ಲೋನ್ ಸೇರಿದಂತೆ ವಿವಿಧ ಲೋನ್ ಗಳನ್ನು ಕಡಿಮೆ ಬಡ್ಡಿ ದರದಲ್ಲಿ ಕೊಡುವುದಾಗಿ ಹೇಳಿ ಮಹಿಲೆ ಪೂರ್ಣಿಮಾ ವಂಚಿಸಿದ್ದಾಳೆ ಎನ್ನಲಾಗಿದೆ. ಮಹಿಳೆಯಿಂದ ಮೋಸ ಹೋದವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
Key words: Woman -cheating -claiming -Congress leaders- give- loans-hubli