ಇದು ಕರೋನಾ ಪ್ರೇಮ ಪುರಾಣ : ಕ್ವಾರಂಟೈನ್ ಸೆಂಟರ್ ನಲ್ಲಿ ಪರ ಪುರುಷನ ಜತೆ ಮಹಿಳಾ ಪೊಲೀಸ್ ಪೇದೆ.

 

ನಾಗಪೂರ, ಜು.17, 2020 : ( www.justkannada.in news ) ಕರೋನಾ ಆರಂಭದ ಕೆಲ ದಿನಗಳಲ್ಲಿ ವಾಟ್ಸ್ ಅಪ್ ನಲ್ಲಿನ ಒಂದು ಜೋಕು ಭಾರಿ ವೈರಲ್ ಆಗಿತ್ತು. ಅದೇನೆಂದ್ರೆ, 5 ಸಾವಿರ ರೂ. ಪಾವತಿಸಿದರೆ, ನಿಮ್ಮ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜತೆಗೆ ಕ್ವಾರಂಟೈನ್ ಮಾಡಿಸಲು ಸಹಕರಿಸುವ ಉಪಾಯದ ಜಾಹಿರಾತು.

ಈಗ ಈ ಹುಡುಗಾಟಿಕೆ, ನೆರೆಯ ಮಹಾರಾಷ್ಟ್ರದಲ್ಲಿ ನಿಜವಾಗಿದ್ದು, ಈ ಘಟನೆಗೆ ಮಹಿಳಾ ಪೊಲೀಸ್ ಪೇದೆಯ ಪ್ರೇಮ ಪ್ರಕರಣವೇ ಮೂಲ ಅನ್ನುವ ಸಂಗತಿ ತಿಳಿದ ಬಳಿಕ, ಅಲ್ಲಿನ ಮಹಾನಗರ ಪಾಲಿಕೆ, ಆರೋಗ್ಯ ವಿಭಾಗ ಮತ್ತು ಪೊಲೀಸ ಇಲಾಖೆಯ ಮೂರು ವಿಭಾಗದವರು ಬೆಚ್ಚಿ ಬಿದ್ದಿದ್ದಾರೆ.

jk-logo-justkannada-logo

ಏನಿದು ಘಟನೆ :

ಮಹಾರಾಷ್ಟ್ರದ ಉಪರಾಜಧಾನಿಯಾದ ನಾಗಪೂರದ ಸುರೇಂದ್ರ ನಗರ ಭಾಗದಲ್ಲಿನ ಪೊಲೀಸ್ ಪ್ರಶಿಕ್ಷಣಾ ಕೇಂದ್ರದಲ್ಲಿನ ಕ್ವಾರಂಟೈನ್ ಸೆಂಟರ್ ಈ ಕರೋನಾ ಪ್ರೇಮ ಕಹಾನಿಯ ಕೇಂದ್ರ.
ಕ್ವಾರಂಟೈನ್ ಆಗ ಬಯಸುವ ಪೊಲೀಸರನ್ನು ಈ ಕೇಂದ್ರದಲ್ಲಿಡಲಾಗಿತ್ತು. ಅದೇ ರೀತಿ ಕೆಲವು ಸಾಮಾನ್ಯ ನಾಗರಿಕರ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿತ್ತು. ನಾಗಪೂರ ಪೊಲೀಸ್ ಕಚೇರಿಯ ವ್ಯಕ್ತಿಗೆ ಕೊರೊನ ಪಾಸಿಟಿವ್ ಧೃಢಪಟ್ಟ ಬಳಿಕ ಉಳಿದವರು ಸಹ ಕ್ವಾರಂಟೈನ್ ಆಗಬೇಕಾಯಿತು.
ಆಗ ಅದೇ ಆಫೀಸ್ ನಲ್ಲಿದ್ದ ಮಹಿಳಾ ಪೊಲೀಸ್ ಸಹ ಈ ಸೆಂಟರ್ ನಲ್ಲಿ ಕ್ವಾರಂಟೈನ್ ಆದಳು. ಕ್ವಾರಂಟೈನ್ ವೇಳೆ ಆಕೆಯ ಜತೆಗೆ ಒಬ್ಬ ಯುವಕನಿದ್ದನು. ಈ ಯುವಕ ತನ್ನ ಗಂಡ. ಈತ ಸತತ ನನ್ನ ಸಂಪರ್ಕದಲ್ಲಿದ್ದಾನೆ, ಆದ್ದರಿಂದ ಅವನಿಗೂ ಸೋಂಕಿನ ಭೀತಿ ಇರುವ ಕಾರಣ ಇಬ್ಬರು ಜತೆಯಲ್ಲೇ ಕ್ವಾರಂಟೈನ್ ಆಗುತ್ತೇವೆ ಎಂದಳು. ನಿಯಮದ ಪ್ರಕಾರ ಮತ್ತು ಮಾನವೀಯ ದೃಷ್ಟಿಕೋನದಿಂದ ಕ್ವಾರಂಟೈನ್ ಸೆಂಟರ್ ಇನ್ಚಾರ್ಜ್ ಆಕೆ ಮತ್ತು ಆತ ಜೊತೆಗಿರಲು ಒಂದು ರೂಮ್ ನೀಡಿದರು.

woman constable-Nagpur police- quarantined-Covid-19- he was her husband.

ಕೆಲ ದಿನಗಳ ಬಳಿಕ, ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬಳು ಒಂದು ಕೇಸ್ ದಾಖಲಿಸಿ, ನನ್ನ ಗಂಡ ಕೆಲವು ದಿನಗಳಿಂದ ಮನೆಗೆ ಬಂದಿಲ್ಲ, ಬೇರೆ ಮಹಿಳೆ ಜತೆ ಆತ ಕ್ವಾರಂಟೈನ್ ಸೆಂಟರ್ ನಲ್ಲಿದ್ದಾನೆ ಎಂದು ದೂರು ಪತ್ರದಲ್ಲಿ ಆರೋಪಿಸಿದ್ದಳು.
ಈ ದೂರು ದಾಖಲಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ಪ್ರಾಥಮಿಕ ತನಿಖೆ ನಡೆಸಿದರು. ತನಿಖೆಯಲ್ಲಿ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ತಕರಾರು ದಾಖಲಿಸಿದ ಮಹಿಳೆಯೇ ಯುವಕನ ನಿಜ ಪತ್ನಿಯೆಂದು ಗೊತ್ತಾಯಿತು. ಕೂಡಲೇ ಸುಳ್ಳು ಮಾಹಿತಿ ಕೊಟ್ಟು ಕ್ವಾರಂಟೈನ್ ಸೆಂಟರ್ ನಲ್ಲಿ ಆತನ ಜತೆಗಿದ್ದ ಮಹಿಳಾ ಪೇದೆಯನ್ನು ಬೇರೆ ಮಾಡಿದರು. ಜತೆಗೆ ಆ ಮಹಿಳಾ ಪೇದೆ ವಿರುದ್ಧ ಕ್ರಮಕ್ಕೂ ಈಗ ಮುಂದಾಗಿದ್ದಾರೆ.

oooooo

KEY WORDS : woman constable-Nagpur police- quarantined-Covid-19- he was her husband.

ENGLISH SUMMARY :

A woman constable attached to the Nagpur police was quarantined for suspected Covid-19 infection with a married man whom she was in relationship with, after she wrongly told the authorities that he was her husband. The woman constable, who is unmarried, was to be moved to a quarantine centre after one of her colleagues recently tested Covid-19 positive, the official said.