ಬೆಂಗಳೂರು, ಡಿಸೆಂಬರ್,17,2020(www.justkannada.in): ಮಹಿಳಾ ಡಿವೈಎಸ್ ಪಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿಐಡಿ ವಿಭಾಗದ ಡಿವೈಎಸ್ಪಿ ಆಗಿದ್ದ ಲಕ್ಷ್ಮೀ (33) ಆತ್ಮಹತ್ಯೆ ಶರಣಾದವರು. ಅನ್ನಪೂರ್ಣೇಶ್ವರಿ ನಗರದ ಸ್ನೇಹಿತನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸ್ನೇಹಿತನ ಮನೆಗೆ ಪಾರ್ಟಿಗೆ ಹೋಗಿದ್ಧ ಡಿವೈಎಸ್ ಪಿ ಲಕ್ಷ್ಮಿ ಪಾರ್ಟಿ ಬಳಿಕ ರೂಮ್ ಲಾಕ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿವೈಎಸ್ಪಿ ಲಕ್ಷ್ಮಿ ಅವರು 2014ರ ಬ್ಯಾಚ್ನ ಕೆಪಿಎಸ್ಸಿ ಅಧಿಕಾರಿಯಾಗಿದ್ದು, 2017ರಲ್ಲಿ ನೇಮಕವಾಗಿದ್ದ ಲಕ್ಷ್ಮೀ ಅವರು ಸದ್ಯ ಸಿಐಡಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಪತಿ ಹೈದರಾಬಾದ್ ನಲ್ಲಿ ಅಮೇಜಾನ್ ನಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀ ಅವರ ಆತ್ಮಹತ್ಯೆಗೆ ಡಿಪ್ರೆಷನ್ ಮತ್ತು ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದೆ.
ಪುತ್ರಿ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ತಂದೆ ವೆಂಕಟೇಶ್, ನನ್ನ ಮಗಳು ಯಾವುದೇ ಡಿಪ್ರೆಷನ್ ಗೆ ಒಳಗಾಗಿಲ್ಲ. ಅವಳಿಗೆ ಮನೆ, ಕಾರು, ಹಣ ಎಲ್ಲವೂ ಇದೆ. ಹೀಗಾಗಿ ಏಕೆ ಡಿಪ್ರೇಷನ್ ಗೆ ಹೋಗುತ್ತಾಳೆ..? ನನಗೆ ನನ್ನ ಪುತ್ರಿ ಸಾವಿನ ಬಗ್ಗೆ ಅನುಮಾನವಿದೆ. ಲಕ್ಷ್ಮೀ ಸ್ನೇಹತರಾದ ಮನು ಪ್ರಜ್ವಲ್ ಮೇಲೆ ಅನುಮಾನ ಇದೆ. ಹೀಗಾಗಿ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
English summary….
Woman DySP commits suicide in Bengaluru
Bengaluru, Dec. 17, 2020 (www.justkannada.in): P. Lakshmi (33), Deputy Superintendent of Police, CID Division has committed suicide.
She was found hanging at one of her friend’s house in Annapoorneshwarinagar. She was a 2014 batch KPSC officer and joined the services in the year 2017. Presently she was serving as CID DySP. Her husband is working at Amazon in Hyderabad. It is suspected that depression and family disputes as the reasons for her suicide.
However, her father Venkatesh has expressed suspicion and has lodged a complaint against her friend Manu Prajwal.
Keywords: P. Lakshmi/ DySP/ suicide
Key words: Woman –DYSP- surrenders – suicide – Bangalore