ಬಾಗಲಕೋಟೆ,ಜುಲೈ,15,2022(www.justkannada.in): ಪರಿಹಾರ ಹಣವನ್ನ ಮಹಿಳೆ ವಾಪಸ್ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ‍್ಧರಾಮಯ್ಯ, ಮಾವೀಯತೆ ದೃಷ್ಠಿಯಂದ ನಾನು ಅವರಿಗೆ ಹಣ ನೀಡಿದ್ದೆ, ಆ ಮಹಿಳೆಯನ್ನ ಯಾರೋ ಎತ್ತಿಕಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕೆರೂರು ಗ್ರಾಮದಲ್ಲಿನ ಸಂಘರ್ಷದಲ್ಲಿ ಗಾಯಗೊಂಡಿದ್ಧವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ ಬಳಿಕ ಅವರಿಗೆ ಪರಿಹಾರ ವಿತರಿಸಿದ್ಧರು. ಆದರೆ ಗಾಯಾಳು ಕುಟುಂಬದ ಮಹಿಳೆ ಪರಿಹಾರವನ್ನ ಸ್ವೀಕರಿಸಲು ನಿರಾಕರಿಸಿ ಸಿದ‍್ಧರಾಮಯ್ಯ ಕಾರಿಗೆ ಹಣವನ್ನ ವಾಪಸ್ ಎಸೆದಿದ್ದರು. ಅಲ್ಲದೆ ನಮಗೆ ನಿಮ್ಮ ಹಣ ಬೇಡ. ನಮಗೆ ಬದುಕಲು ಶಾಂತಿ, ನ್ಯಾಯ ಬೇಕು ಎಂದಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ಧರಾಮಯ್ಯ, ಮಾವೀಯತೆ ದೃಷ್ಠಿಯಂದ ನಾನು ಅವರಿಗೆ ಹಣ ನೀಡಿದ್ದೆ. ಮೃತಪಟ್ಟವರ ಕುಟುಂಬದವರಿಗೂ ಪರಿಹಾರ ಕೊಡುತ್ತೇವೆ ಹಾಗಾದ್ರೆ ಮೃತಪಟ್ಟವರು ಎದ್ದು ಬರ್ತರಾ..? ಇದು ಪರಿಹಾರ ಅಲ್ಲ. ಮಾನವೀಯತೆಯಿಂದ ನೀಡಿದ್ದು. ಕಷ್ಟಕ್ಕೆಲ್ಲಾ ಆಗುತ್ತೆ ಅಂತಾ ಕೊಟ್ಟಿದ್ದಲ್ಲ. ಮಾನವೀಯತೆ ದೃಷ್ಠಿಯಿಂದ ನೀಡಿದ್ದೇನೆ. ಆ ಮಹಿಳೆಯನ್ನ ಯಾರೋ ಎತ್ತಿಕಟ್ಟಿದ್ದಾರೆ. ಯಾರೂ ಕೂಡ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ನಾವು ಜನಪ್ರತಿನಿಧಿಗಳು ಯಾಕೆ ಇರೋದು. ಇಂತಹ ಘಟನೆಗಳು ನಡೆಯದಂತೆ ತಡೆಯುವುದು ನಮ್ಮ ಕೆಲಸ. ಪರಿಹಾರವನ್ನ ತಲುಪಿಸಿದ್ದೇವೆ. ಅದನ್ನ ಸ್ವೀಕರಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
Key words: woman -threw back -compensation –money-former CM-siddaramaiah