ಬೆಂಗಳೂರು,ಜೂನ್,12,2023(www.justkannada.in): ನಿನ್ನೆ ರಾಜ್ಯಾದ್ಯಂತ ಶಕ್ತಿಯೋಜನೆಗೆ ಚಾಲನೆ ಸಿಕ್ಕಿದ್ದು ಈ ಮೂಲಕ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ.
ಮಹಿಳೆಯರು ಉಚಿತ ಪ್ರಯಾಣ ಬೆಳೆಸಲು ಒರಿಜಿನಲ್ ಐಡಿ ಕಾರ್ಡ್ ಹೊಂದಿರಬೇಕು ಎಂಬ ನಿಯಮವಿತ್ತು. ಆದರೆ ರಾಜ್ಯದ ಹಲವೆಡೆ ಐಡಿ ಪ್ರೂಫ್ ವಿಚಾರಕ್ಕೆ ಕಂಡಕ್ಟರ್ ಹಾಗೂ ಮಹಿಳಾ ಪ್ರಯಾಣಿಕರ ನಡುವೆ ಗಲಾಟೆ, ಮಾತಿನ ಚಕಮಕಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ನಕಲು ಪ್ರತಿ ತೋರಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣಿಸಬಹುದು ಎಂದು ಹೇಳಿದೆ.
ಈ ಮೂಲಕ ಒರಿಜಿನಲ್ ಐಡಿ ಬೇಕಾ? ಅಥವಾ ನಕಲು (ಝರಾಕ್ಸ್) ಪ್ರತಿ ಇದ್ದರೆ ಸಾಕಾ? ಎನ್ನುವ ಎಲ್ಲಾ ಗೊಂದಲಗಳಿಗೆ ಇದೀಗ ತೆರೆ ಎಳೆದಿದೆ.
ಈ ಕುರಿತು ಸಾರಿಗೆ ಇಲಾಖೆ ತಿದ್ದುಪಡಿ ಆದೇಶ ಹೊರಡಿಸಿದ್ದು, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿಯ ಝರಾಕ್ಸ್ ಇದ್ದರೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಾರ್ಡ್ ಮತ್ತು ಸಾಫ್ಟ್ ಕಾಪಿ ಇದ್ದರೂ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
Key words: women -do not -need -original ID – free- bus travel.