ನವದೆಹಲಿ, ಜನವರಿ 17, 2022 (www.justkannada.in): ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ದೆಹಲಿಯ ಕೊನ್ನಾಟ್ ಪ್ಲೇಸ್ ಹಾಗೂ ಸೌತ್ ಎಕ್ಸ್ಟೆನ್ಷನ್ ಗಳಲ್ಲಿ ಪರಿಚಯಿಸಲಾದ ವುಡ್‌ಲ್ಯಾಂಡ್ ಪ್ರಸ್ತುತ ದೇಶದಾದ್ಯಂತ ಸುಮಾರು ೬೦೦ ಕ್ಕೂ ಹೆಚ್ಚಿನ ಇಬಿಒಗಳನ್ನು (Exclusive Brand Outlets) ಹೊಂದಿದ್ದು ೫,೫೦೦ ಎಂಬಿಒಗಳಲ್ಲಿ (Multibrand outlets) ಷೆಲ್ಫ್ ಸ್ಥಳವನ್ನು ಕಬಳಿಸಿದೆ. ಕಂಪನಿಯು ಮಧ್ಯಪೂರ್ವ, ಹಾಂಗ್ ಕಾಂಗ್ ಹಾಗೂ ದುಬೈ ರಾಷ್ಟçಗಳಲ್ಲಿ ತನ್ನ ಛಾಪನ್ನು ಮೂಡಿಸಿದ್ದರೂ ಸಹ ತನ್ನ ರೂ.೧,೨೫೦ ಕೋಟಿ ಮೊತ್ತದ ಒಟ್ಟು ವಹಿವಾಟಿ ಪೈಕಿ ಶೇ.೭೫ರಷ್ಟು ಪಾಲು ಭಾರತದಿಂದಲೇ ಬರುತ್ತಿದೆ.
ಈ ಸಂಗತಿ ನಮಗೆಲ್ಲಾ ಆಶ್ಚರ್ಯವನ್ನು ಉಂಟು ಮಾಡಬಹುದು, ಆದರೆ ಈಗ ಕೆಲವು ದಶಕಗಳಿಂದಲೂ ಸಹ ಅತ್ಯಂತ ಜನಪ್ರಿಯತೆಯನ್ನು ಗಳಿಸಿರುವ ವುಡ್‌ಲ್ಯಾಂಡ್ ವಾಸ್ತವದಲ್ಲಿ ಭಾರತೀಯ ಬೇರುಗಳನ್ನು ಹೊಂದಿದೆ. ‘ಎರೊ ಗ್ರೂಪ್,’ ವುಡ್‌ಲ್ಯಾಂಡ್‌ನ ಮಾತೃ ಸಂಸ್ಥೆಯಾಗಿದೆ. ಅವತಾರ್ ಸಿಂಗ್ ಎನ್ನುವವರು ಈ ಕಂಪನಿಯನ್ನು ೧೯೮೦ ರ ದಶಕದಲ್ಲಿ ಕೆನಡಾದ ಕ್ಯೂಬೆಕ್ ನಲ್ಲಿ ಸ್ಥಾಪಿಸಿದರು. ಆ ಸಮಯದಲ್ಲಿ ‘ಏರೊ ಗ್ರೂಪ್, ಕೆನಡಾ ಹಾಗೂ ರಷ್ಯಾ ದೇಶಗಳಿಗಾಗಿ ವಿಂಟರ್ ಬೂಟ್ಸ್ (ಚಳಿಗಾಲದ ವಿಶೇಷ ಪಾದರಕ್ಷೆಗಳು) ಗಳನ್ನು ತಯಾರಿಸುತಿತ್ತು.
ಅವತಾರ್ ಸಿಂಗ್ ಅವರ ಪುತ್ರ ಹರ್‌ಕ್ರಿತ್ ಸಿಂಗ್ ಅವರು ಪ್ರಸ್ತುತ ವುಡ್ ಲ್ಯಾಂಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. “ನಮ್ಮ ತಂದೆ ೧೯೭೦ರ ದಶಕದಿಂದಲೂ ಷೂಗಳನ್ನು ತಯಾರಿಸುವ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮದೇ ಸ್ವಂತ ಟ್ಯಾನರಿಗಳು ಹಾಗೂ ಕಾರ್ಖಾನೆಗಳಿದ್ದು, ವಿಶೇಷವಾಗಿ ಯುಎಸ್‌ಎಸ್‌ಆರ್‌ಗೆ ಷೂಗಳನ್ನು ತಯಾರಿಸಿಕೊಡುತ್ತಿದ್ದೆವು. ಆದರೆ ಆಗ ನಮ್ಮದೇ ಆದ ಸ್ವಂತ ಬ್ರ್ಯಾಂಡ್ ಇರಲಿಲ್ಲ. ೧೯೮೦ರ ದಶಕದಲ್ಲಿ ಕಂಪನಿಯನ್ನು ಸ್ಥಾಪಿಸಿ, ಮಾರುಕಟ್ಟೆಯನ್ನು ಪ್ರವೇಶಿಸಿದೆವು,” ಎನ್ನುತ್ತಾರೆ ಹರ್‌ಕ್ರಿತ್ ಸಿಂಗ್
ಭಾರತಕ್ಕೆ ಪ್ರವೇಶ
ಏರೊ ಗ್ರೂಪ್ ನ ವಹಿವಾಟು, ೧೯೯೦ರ ದಶಕದಲ್ಲಿ ಸೋವಿಯತ್ ಯೂನಿಯನ್ ಅನ್ನು ವಿಸರ್ಜಿಸಿದಾಗ ರಷ್ಯಾದ ಮಾರುಕಟ್ಟೆ ಕುಸಿದ ಸಂದರ್ಭದಲ್ಲಿ ಏರೊ ಗ್ರೂಪ್ ನ ವ್ಯಾಪಾರ ಉತ್ತುಂಗದಲ್ಲಿತ್ತು. “ನಮ್ಮ ವ್ಯಾಪಾರದ ಬಹು ದೊಡ್ಡ ಪಾಲು ರಷ್ಯಾದಲ್ಲಿದ್ದ ಕಾರಣದಿಂದಾಗಿ ಅದು ನಮಗೆ ಬಹಳ ಕಷ್ಟದ ಕಾಲವಾಗಿತ್ತು. ನಮ್ಮ ವ್ಯಾಪಾರ ಯೂರೋಪ್ ಹಾಗೂ ಕೆನಡಾ ದೇಶಗಳಲ್ಲಿತ್ತಾದರೂ ಸಹ, ನಮಗೆ ಬೆಳೆಯುತ್ತಿರುವ ಮಾರುಕಟ್ಟೆಯ ಅವಶ್ಯಕತೆ ಇತ್ತು.”
೧೯೯೨ರಲ್ಲಿ ಅವತಾರ್ ಹಾಗೂ ಹರ್‌ಕ್ರಿತ್ ಸಿಂಗ್ ಅವರು ವಿಶೇಷ ಮಾರಾಟ ಮಳಿಗೆಗಳು ಹಾಗೂ ಮಾಲ್ ಸಂಸ್ಕೃತಿ ಆರಂಭವಾಗುತ್ತಿದ್ದ ಭಾರತೀಯ ಮಾರುಕಟ್ಟೆ ಬೆಳೆಯುತ್ತಿರುವುದನ್ನು ಗಮನಿಸಿ ಭಾರತವನ್ನು ಪ್ರವೇಶಿಸಲು ನಿರ್ಧರಿಸಿದರು. ಈ ತಂದೆ-ಮಗ ಇಬ್ಬರೂ ‘ಏರೊ ಗ್ರೂಪ್’ನಡಿ ವುಡ್‌ಲ್ಯಾಂಡ್ ಬ್ರ್ಯಾಂಡ್ ಮೂಲಕ ಭಾರತೀಯ ಮಾರುಕಟ್ಟೆಗೆ ಮೊಟ್ಟ ಮೊದಲ ಬಾರಿಗೆ ಕೈಯಿಂದ ಹೊಲೆಯಲಾಗಿರುವ ಚರ್ಮದ ಬೂಟುಗಳನ್ನು ಪರಿಚಯಿಸಿದರು, ಮತ್ತು ಇದು ಕೂಡಲೇ ದೇಶದಾದ್ಯಂತ ಅತ್ಯಂತ ಜನಪ್ರಿಯತೆಯನ್ನು ಗಳಿಸಿತು.
ಕಂಪನಿಯು ಮೊದಲಿಗೆ ದೆಹಲಿಯ ಕೊನ್ನಾಟ್ ಪ್ಲೇಸ್ ಹಾಗೂ ಸೌತ್ ಎಕ್ಸ್ಟೆನ್ಷನ್‌ಗಳಲ್ಲಿ ತನ್ನ ಎರಡು ವಿಶೇಷ ಮಾರಾಟ ಮಳಿಗೆಗಳನ್ನು (ಇಬಿಒಗಳು) ಉದ್ಘಾಟಿಸಿತು. ಇಂದು ವುಡ್ ಲ್ಯಾಂಡ್ ದೇಶದಾದ್ಯಂತ ೬೦೦ ಕ್ಕೂ ಹೆಚ್ಚಿನ ಸಂಖ್ಯೆಯ ಇಬಿಒಗಳನ್ನು ಹೊಂದಿದ್ದು, ೫,೫೦೦ ಮಲ್ಟಿ ಬ್ರ್ಯಾಂಡ್ (ಎಂಬಿಒಗಳು) ಔಟ್‌ಲೆಟ್ ಗಳಲ್ಲಿ ಷೆಲ್ಫ್ ಸ್ಥಳವನ್ನು ಹೊಂದಿದೆ. ಹರ್‌ಕ್ರಿತ್ ಸಿಂಗ್ ಅವರು ಪ್ರಕಾರ ಕಂಪನಿಯ ಒಟ್ಟು ವಹಿವಾಟು ರೂ.೧,೨೫೦ ಕೋಟಿಗಳಂತೆ.
ಆದರೆ ಭಾರತದಲ್ಲಿ ಅನೇಕರು ಒಂದೇ ಕಡೆ ಎಲ್ಲಾ ರೀತಿಯ ಪೂರಕ ವಸ್ತುಗಳನ್ನು ಖರೀದಿಸಲು ಬಯಸುವುದನ್ನು ಗಮನಿಸಿ ಕೇವಲ ಬೂಟುಗಳ ತಯಾರಿಕೆ ಹಾಗೂ ಮಾರಾಟವಷ್ಟೇ ಸಾಕಾಗುವುದಿಲ್ಲ ಎಂದು ಅರಿತ ಅಪ್ಪ-ಮಗ ಉದ್ಯಮಿಗಳು, ತನ್ನ ಮಳಿಗೆಗಳಲ್ಲಿ ಅಪ್ಪಾರೆಲ್ ಹಾಗೂ ಇತರೆ ಆ್ಯಕ್ಸಸೆರಿಗಳ ಮಾರಾಟವನ್ನೂ ಆರಂಭಿಸಿದರು.
“ಪ್ರತಿ ಪ್ರಾಂತ್ಯದಲ್ಲೂ ನಮ್ಮ ಉತ್ಪನ್ನಗಳು ಬದಲಾಗುತ್ತವೆ. ನಮ್ಮಲ್ಲಿ, ಉತ್ತರ ಭಾರತದಲ್ಲಿ ಬೇಸಿಗೆ ಹಾಗೂ ಚಳಿಗಾಗಲಕ್ಕೆಂದೇ ಪ್ರತ್ಯೇಕ ಸಂಗ್ರಹದ ಉತ್ಪನ್ನಗಳಿವೆ. ದಕ್ಷಿಣ ಭಾರತದಲ್ಲಿ ಶೇ.೮೦ರಷ್ಟು ಬೇಸಿಗೆಯ ಸರಣಿ ಉತ್ಪನ್ನಗಳಿರುತ್ತವೆ. ನಮ್ಮಲ್ಲಿ ಎಸ್‌ಕೆಯುಗಳು ಹಾಗೂ ಪಾದರಕ್ಷೆಗಳ ಅಳತೆಯೂ ಸಹ ಕಾಲಮಾನ ಹಾಗೂ ಪ್ರದೇಶವಾರು ಬದಲಾಗುತ್ತವೆ,” ಎನ್ನುತ್ತಾರೆ ಹರ್‌ಕ್ರಿತ್ ಸಿಂಗ್
ಗುಣಮಟ್ಟಕ್ಕೆ ಆದ್ಯತೆ
ಮುಂದಿನ ಕೆಲವು ವರ್ಷಗಳಲ್ಲಿ ವುಡ್‌ಲ್ಯಾಂಡ್ ಹಾಂಗ್ ಕಾಂಗ್, ಮಧ್ಯಪೂರ್ವ, ದುಬೈ ಹಾಗೂ ದಕ್ಷಿಣ ಆಫ್ರಿಕಾ ದೇಶಗಳಿಗೂ ತನ್ನ ವಹಿವಾಟನ್ನು ವಿಸ್ತರಿಸಿತು. ಆದರೆ ನಮ್ಮ ಒಟ್ಟು ವಹಿವಾಟಿನ ಪೈಕಿ ಶೇ.೭೫ರಷ್ಟು ಪಾಲು ಭಾರತದಿಂದಲೇ ಬರುತ್ತಿದೆ ಎನ್ನುತ್ತಾರೆ ಹರ್‌ಕ್ರಿತ್.
ವುಡ್‌ಲ್ಯಾಂಡ್ಸ್ ನ ಉತ್ಪನ್ನಗಳ ಸುಲಭ ರಫ್ತಿಗಾಗಿ ಉತ್ಪನ್ನಗಳನ್ನು ದೇಶದ ಅನೇಕ ಸ್ಥಳಗಳಲ್ಲಿ ತಯಾರಿಸಿ, ಜೋಡಿಸುವ ಘಟಕಗಳನ್ನು ಸ್ಥಾಪಿಸಲಾಗಿವೆ. ಈ ಪೈಕಿ ನೋಯ್ಡಾದಲ್ಲಿ ಅತೀ ದೊಡ್ಡ ತಯಾರಿಕಾ ಘಟಕವಿದೆ. ವುಡ್‌ಲ್ಯಾಂಡ್ಸ್ ನ ಉತ್ಪನ್ನಗಳಿಗೆ ಉಪಯೋಗಿಸುವ ಚರ್ಮ ಪಂಜಾಬ್‌ನ ಜಲಂಧರ್‌ನಿAದ ಪಡೆಯಲಾಗುತ್ತಿದೆ. ಕಂಪನಿಯು ಬಾಂಗ್ಲಾದೇಶ, ಟೈವಾನ್, ಚೀನಾ ದೇಶಗಳೊಂದಿಗೂ ಸಂಯೋಜನೆಯನ್ನು ಹೊಂದಿದೆ.
ಸೋಲ್ ಗಳು ಒಳಗೊಂಡಂತೆ ಷೂಗಳಿಗೆ ಬಳಸುವ ಕಚ್ಚಾ ವಸ್ತುಗಳನ್ನು ಕಂಪನಿ ಸ್ವತಃ ತಯಾರಿಸುತ್ತದೆ. ಆಯ್ದ ಇಟಾಲಿಯನ್ ಚರ್ಮದ ಟ್ಯಾನ್ನಿಂಗ್ ಹಾಗೂ ಫಿನಿಷಿಂಗ್‌ಗಾಗಿ ಇಟಲಿಯ ಯಂತ್ರೋಪಕರಣಗಳನ್ನೇ ಬಳಸುತ್ತಿದೆ. ಬಲಿಷ್ಠ ರಬ್ಬರ್ ಸೋಲ್‌ಗಳನ್ನು ತಯಾರಿಸಲು ಕಂಪನಿ ಜರ್ಮನಿಯ ತಂತ್ರಜ್ಞಾನವನ್ನು ಬಳಸುತ್ತಿದೆ.
ಇತರೆ ಉಡುಗೆಗಳನ್ನು ತಯಾರಿಸಲು ಕೋರಿಯಾ ಹಾಗೂ ಜಪಾನ್‌ನಿಂದ ಸಿಂಥೆಟಿಕ್ ಫೈಬರ್ ಅನ್ನು ಆಮದು ಮಾಡಿಕೊಳ್ಳುತ್ತಿದೆ. ಜೊತೆಗೆ ಕಂಪನಿಯು ದಕ್ಷಿಣಭಾರತದಿಂದ ಕಾಟನ್ ಬಟ್ಟೆಯನ್ನೂ ಅವಲಂಭಿಸಿದೆ.
ಸುದ್ದಿ ಮೂಲ: ಯುವರ್‌ಸ್ಟೋರಿ.ಕಾಂ
Key words: ‘Woodland- Footwear- Company -emerged – brand – India.