ಮೈಸೂರು,ಜು,15,2020(www.justkannada.in): ಕೊವಿಡ್ ಸೊಂಕಿತರ ಸಂಖ್ಯೆ ಡೆತ್ ರೇಟ್ ಕಡಿಮೆಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿಗಾವಹಿಸುವಂತೆ ಅಧಿಕಾರಿಗಳಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಸೂಚಿಸಿದರು.
ಮೈಸೂರಿನಲ್ಲಿ ಕೊರೋನ ವ್ಯಾಪಕವಾಗಿ ಹರಡುತ್ತಿರವ ಹಿನ್ನಲೆ, ಜಿಲ್ಲೆಯ ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಜತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಸಭೆ ನಡೆಸಿ ಚರ್ಚಿಸಿದರು. ಹೋಂ ಐಸೋಲೇಷನ್, ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್, ಎನ್ ಆರ್ ವ್ಯಾಪ್ತಿಯ ಲಾಕ್ ಡೌನ್ ಹಾಗೂ ಸರ್ವೇ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕೊರೋನಾ ಸೋಂಕಿತ ಸಂಖ್ಯೆ ಮತ್ತು ಸಾವಿನ ಪ್ರಮಾಣವನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಡಿಸಿ ಅಭಿರಾಂ ಜೀ ಶಂಕರ್ ಸೂಚನೆ ನೀಡಿದರು. ಹಾಗೆಯೇ ಹೋಂ ಐಸೋಲೇಷನ್ ಗೆ ಅನುಮತಿ ನೀಡುವಾಗ ಸರ್ಕಾರದ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
Key words: Work – reducing-number -death rate -Mysore DC –Abhiram ji Shankar