ಮೈಸೂರು,ಜೂ,3,2020(www.justkannada.in) ಕೊರೋನಾ ವೈರಸ್ ಹಾವಳಿ ಹಿನ್ನೆಲೆ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಪುನರಾರಂಭ ಮಾಡಿಲಾಗಿದೆ.
ರಸ್ತೆ ಅಗಲೀಕರಣ ಕಾಮಗಾರಿ ಪುನಾರಂಭ ಹಿನ್ನೆಲೆ ಇಂದಿನಿಂದ 3ತಿಂಗಳ ಕಾಲ ಇರ್ವಿನ್ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಇರ್ವಿನ್ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಒಟ್ಟು 46.2ಕೋಟಿ ಮೀಸಲಿಡಲಾಗಿದೆ. ಗ್ರಾಮಾಂತರ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದ ವರೆಗೆ 60ಅಡಿ ಅಗಲಕ್ಕೆ ಒಟ್ಟು 1.6 ಕಿ.ಮೀ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ.
ರಸ್ತೆ ಬದಿಯ 86ಕಟ್ಟಡಗಳ ಪೈಕಿ 83ಕಟ್ಟಡಗಳ ತೆರವು ಕಾರ್ಯಚರಣೆ ಮಾಡಲಾಗಿದ್ದು, ಮೈಸೂರು ಮಹಾನಗರ ಪಾಲಿಕೆ ಈಗಾಗಲೇ ಕಟ್ಟಡಗಳ ಮಾಲೀಕರಿಗೆ ಪರಿಹಾರ ವಿತರಣೆ ಮಾಡಿದೆ. ಹೀಗಾಗಿ ಕಾಮಗಾರಿ ಪುನಾರಂಭ ಹಿನ್ನೆಲೆ ರಸ್ತೆ ಬಂದ್ ಮಾಡಿ ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿದೆ.
Key words: Work- restart-Traffic- Irvine Road-bandh- Mysore.