ಮಕ್ಕಳ ಭಿಕ್ಷಾಟನೆ ತಡೆಯಲು ಇಲಾಖೆ ಜತೆ ಕೈಜೋಡಿಸಿ : ಶಿವಕುಮಾರ್ ಮನವಿ

ಮೈಸೂರು,ನವೆಂಬರ್,01,2020(www.justkannada.in) :  ಪಟ್ಟಣದಲ್ಲಿ ಚಿಕ್ಕ ಮಕ್ಕಳು, ಅಪ್ರಾಪ್ತ ಮಕ್ಕಳು ಭಿಕ್ಷಾಟನೆ ಮಾಡುವುದು ಕಂಡುಬಂದರೆ ಮಾಹಿತಿ ಕೊಟ್ಟು ಭಿಕ್ಷಾಟನೆ ತಡೆಯುವ ಕೆಲಸದಲ್ಲಿ ಕೈ ಜೋಡಿಸಬೇಕು ಎಂದು ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಕುಮಾರ್ ಹೇಳಿದರು.jk-logo-justkannada-logo

ನಂಜನಗೂಡು ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘದ ಸಭೆಯಲ್ಲಿ ಕನ್ನಡ ರಾಜ್ಯೋತ್ಸವ ಮಾಸದಲ್ಲಿ ಭಿಕ್ಷಾಟನೆ ತಡೆಯಲು ಜಾಗೃತಿ ಮೂಡಿಸುವ ಕುರಿತು ಮಾತನಾಡಿದರು.

ನಂಜನಗೂಡು ಪಟ್ಟಣ ಧಾರ್ಮಿಕ ಕೇಂದ್ರ,ಪ್ರವಾಸಿ ತಾಣವಾಗಿದೆ. ಹೊರಗಿನಿಂದ ಹೆಚ್ಚು ಜನರು ಬರುವ ಕಾರಣ ಮಕ್ಕಳನ್ನು ಮುಂದಿಟ್ಟುಕೊಂಡು ಭಿಕ್ಷಾಟನೆ ಮಾಡಿಸುವುದು, ಚಿಕ್ಕ ಮಕ್ಕಳನ್ನು ಅಪಹರಿಸುವುದು,ಮಕ್ಕಳನ್ನು ಕದ್ದು ಮಾರಾಟ ಮಾಡುವ ಕಾರಣ ಚಾಲಕರು ಇವುಗಳ ಕುರಿತು ನಿಗಾವಹಿಸಬೇಕು ಎಂದು ಸಲಹೆ ನೀಡಿದರು.

Work,Department,Prevent,Child,Behavior,Sivakumar,appeals

ದೇವಾಲಯ ಬಸ್ ನಿಲ್ದಾಣ ಹೊಳೆದಂಡೆ ಬಿಕ್ಷುಕರನ್ನು ಚಿಕ್ಕ ಮಕ್ಕಳು ಕಂಡು ಬಂದರೆ ಅವರನ್ನು ನಿರ್ಗತಿಕ ಮಕ್ಕಳ ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡಲಾಗುತ್ತದೆ. ಆಟೋರಿಕ್ಷಾ ಚಾಲಕರು, ಮಾಲೀಕರು ಕನ್ನಡ ರಾಜ್ಯೋತ್ಸವ ಮಾಸದಲ್ಲಿ ಕನ್ನಡದ ಕೆಲಸ ಮಾಡುವ ಜತೆಗೆ ಮಕ್ಕಳ ಬಗ್ಗೆ ಗಮನಹರಿಸಬೇಕು ಎಂದರು.

ಹೊರರಾಜ್ಯ,ಜಿಲ್ಲೆಯಿಂದ ಬಂದವರು ತಮ್ಮ ಮಕ್ಕಳನ್ನು ಸರ್ಕಲ್ ನಲ್ಲಿ ಭಿಕ್ಷಾಟನೆಗೆ ಬಿಡುತ್ತಾರೆ. ಹದಿನೆಂಟು ವರ್ಷದ ಮಕ್ಕಳು ಭಿಕ್ಷಾಟನೆ ಮಾಡುವುದು ಕಾನೂನು ಬಾಹಿರವಾಗಿದೆ. ಅಂತಹ ಮಕ್ಕಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ನಾವು ತಕ್ಷಣ ಕಾರ್ಯಪ್ರವೃತ್ತರಾಗಿ ಅದನ್ನು ತಡೆದು ಅಂತಹ ಮಕ್ಕಳ ಬಗ್ಗೆ ಶಿಕ್ಷಣವನ್ನು ಕೊಡಿಸಲು ಬಾಲಾಮಂದಿರಕ್ಕೆ ಬಿಡುತ್ತೇವೆ ಎಂದು ತಿಳಿಸಿದರು.

Work,Department,Prevent,Child,Behavior,Sivakumar,appeals

key words : Work-Department-Prevent-Child-Behavior-Sivakumar-appeals