ಮೈಸೂರು,ಮೇ,19,2021(www.justkannada.in): ಪಾಲಿಕೆಯಲ್ಲಿ ಯಾವುದೇ ನೌಕರರು ಕೊರೋನಾ ಸೋಂಕಿನಿಂದ ಮೃತಪಟ್ಟರೆ 5 ಲಕ್ಷ.ರೂ ಪರಿಹಾರ ನೀಡಲಿದ್ದೇವೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪನಾಗ್ ತಿಳಿಸಿದರು.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಪಾಲಿಕೆ ಆಯುಕ್ತೆ ಶಿಲ್ಪನಾಗ್, ಪಾಲಿಕೆಯ 6 ಮಂದಿ ಪೌರಕಾರ್ಮಿಕರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ ನಾಲ್ವರು ಹೋಮ್ ಐಸೋಲೇಶನ್ ನಲ್ಲಿದ್ದಾರೆ. ಉಳಿದ ಇಬ್ಬರು ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಬಗ್ಗೆ ಸದಾ ಕಾಳಜಿ ವಹಿಸಿ ನಿಗಾ ಇಡಲಾಗುತ್ತಿದೆ. ಫ್ರೆಂಟ್ ಲೈನ್ ವಾರಿಯರ್ಸ್ ಗೆ ಪ್ರತ್ಯೇಕ ಆಸ್ಪತ್ರೆ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು.
ಬ್ಲಾಕ್ ಫಂಗಸ್ ನಿಂದ ಪಾಲಿಕೆಯ ಒಬ್ಬ ಗುತ್ತಿಗೆ ಕಾರ್ಮಿಕನ ಸಾವನ್ನಪ್ಪಿದ್ದಾನೆ. ನಿನ್ನೆ ಪಾಲಿಕೆಯ ಇಬ್ಬರು ಹೊರ ಗುತ್ತಿಗೆ ನೌಕಕರು ಕೋವಿಡ್ ಬಲಿಯಾಗಿದ್ದಾರೆ. ಈ ಪೈಕಿ ರವಿ ಎಂಬ ಡ್ರೈವರ್ ಮಾತ್ರ ಬ್ಲಾಕ್ ಫಂಗಸ್ ಗೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ನೌಕರ ವಿನೋದ್ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇದರಿಂದ ಸಾಕಷ್ಟು ಬೇಸರವಾಗಿದೆ ಎಂದರು.
ಪಾಲಿಕೆಯಲ್ಲಿ ಯಾವುದೇ ನೌಕರರು ಸೋಂಕಿನಿಂದ ಮೃತಪಟ್ಟರೆ 5 ಲಕ್ಷ ರೂ ಪರಿಹಾರ ನೀಡಲಿದ್ದೇವೆ. ಈ ಬಗ್ಗೆ ಕಳೆದ ಬಜೆಟ್ ನಲ್ಲಿ ತೀರ್ಮಾನಿಸಲಾಗಿದೆ. ಖಾಯಂ ಪೌರ ಕಾರ್ಮಿಕರಿಗೆ ಸರ್ಕಾರದಿಂದ 30 ಲಕ್ಷ ಪರಿಹಾರ ನೀಡಲಾಗುತ್ತೆ. ಸರ್ಕಾರ ಹಣ ಬಿಡುಗಡೆ ಮಾಡುವವರೆಗೂ ಪಾಲಿಕೆಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಶಿಲ್ಪನಾಗ್ ತಿಳಿಸಿದರು.
Key words: workers -died – corona-5 lakhs –compensation-mysore city corporation-Commissioner -Shilpanag