ಮೈಸೂರು,ಮೇ,23,2022(www.justkannada.in): ಮೈಸೂರು ಅರಮನೆ ಮಂಡಳಿ ವತಿಯಿಂದ ಪ್ಯಾಲೇಸ್ ಗೈಡ್ ಗಳಿಗೆ ಇಂದಿನಿಂದ ಒಂದು ವಾರಗಳ ಕಾಲ ಕಾರ್ಯಗಾರ ಆಯೋಜನೆ ಮಾಡಲಾಗಿದ್ದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಗಾರಕ್ಕೆ ಚಾಲನೆ ನೀಡಿದರು.
ಮೈಸೂರು ಪುರಾತತ್ವ ಅಧ್ಯಯನ ಕೇಂದ್ರ ಹಾಗೂ ಮುಕ್ತ ವಿವಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮಕ್ಕೆ ರಾಜವಂಶಸ್ಥ ಯದುವೀರ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಪ್ರವಾಸಿಗರಿಗೆ ಮಾಹಿತಿ ನೀಡುವ ಗೈಡ್ ಗಳಿಗೆ ತರಬೇತಿ ಕಾರ್ಯಗಾರ ಇದಾಗಿದ್ದು, ಮೈಸೂರು ಸಂಸ್ಥಾನದ ಇತಿಹಾಸ, ಪುರಾಣ, ರಾಜರ ಆಳ್ವಿಕೆ ಬಗ್ಗೆ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್, ಇತಿಹಾಸಕಾರ ಪ್ರೊ.ನಂಜರಾಜೇ ಅರಸು ಅವರು ತಿಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅರಮನೆ ಮಂಡಳಿ ನಿರ್ದೇಶಕ ಸುಬ್ರಮಣ್ಯ, ಕೆಎಸ್ಓಯು ಕುಲಪತಿ ಪ್ರೊ.ವಿದ್ಯಾಶಂಕರ್ ಭಾಗಿಯಾಗಿದ್ದರು.
Key words: Workeshop- Palace Guides –mysore-palace-board-Yaduveer