ಬೆಂಗಳೂರು, ಸೆಪ್ಟೆಂಬರ್ 08, 2019 (www.justkannada.in): ನಗರದ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ ಬಯೋ ಜಿನೆಸಿಸ್ ಹೆಲ್ತ್ ಕ್ಲಸ್ಟರ್ ಆಶ್ರಯದಲ್ಲಿ ಐದನೇ ವಿಶ್ವ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಸಮಾವೇಶವನ್ನ ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು 23 ನೇ ವಯಸ್ಸಿನಲ್ಲಿ ಎಸ್ ಪಿ ಯಾಗಿದ್ದೆ. ಪರ್ಸನಲ್ ಫಿಟ್ನೆಸ್ ಹಾಗೂ ಮೆಂಟಲ್ ಫಿಟ್ನೆಸ್ ಗೆ ಆದ್ಯತೆ ಕೊಡುತ್ತಿದ್ದೆ. ಬೆಳಗ್ಗೆ ಪೊಲೀಸ್ ಠಾಣೆಗೆ ಹೋಗುತ್ತಿದ್ದೆ. ನನ್ನ ವೃತ್ತಿ ಜೀವನದಲ್ಲಿ ಸಿಬ್ಬಂದಿಗಳಿಂದ ತುಂಬಾ ಕಲಿತಿದ್ದೇನೆ. ನಾವು ಮೊದಲು ಒಳ್ಳೆಯ ನಾಗರಿಕರಾಗಬೇಕು.ಐಪಿಎಸ್ ಅನ್ನೋದು ಜನರಿಗೆ ಸಹಾಯ ಮಾಡುವ ಸರ್ವೀಸ್ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ರಾಣಿ ಪ್ರಮೋದ ದೇವಿ ಒಡೆಯರ್, ನಾನು ಒಬ್ಬ ಉದ್ಯಮಿಯಾಗಿಲ್ಲ.ಆಗಿನ ಕಾಲದಲ್ಲಿ ಸಾಕಷ್ಟು ಸ್ವಾತಂತ್ರ್ಯವಿತ್ತು. ಎಲ್ಲರೂ ಒಂದೇ ಎಂಬ ಭಾವನೆ ಇತ್ತು. ಆದರೆ ಈಗ ಎಲ್ಲವೂ ಬದಲಾಗಿದೆ..ಮಹಿಳಾ ಸಬಲೀಕರಣ ಬೇರೆ ಬೇರೆ ರೀತಿ ವರ್ಣಿಸಬಹುದು ಎಂದರು.
ಸಬಲೀಕರಣ, ಅವಕಾಶ, ವಿದ್ಯಾಭ್ಯಾಸ, ಹೀಗೆ ನಾನಾ ರೀತಿ ವರ್ಣಿಸಬಹುದು.. ಸಂಸ್ಕ್ರತಿಯ ಜೊತೆ ಜೊತೆಗೆ ಕೆಲ ವಿಷಯಗಳನ್ನ ಉಳಿಸುವ ಜವಾವ್ದಾರಿ ಮಹಿಳೆಯರದ್ದಾಗಿದೆ. ಕೆಲಭಾಗಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು..ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಬೇಕು. ಎಂದು ಕಿವಿ ಮಾತು ಹೇಳಿದರು.
ಸಮಾವೇಶದ ಸಂಚಾಲಕ ಡಾ. ವಿ.ಪಿ. ರಾವ್ ಮಾತನಾಡಿ, ನನ್ನ 25 ವರ್ಷದ ಅನುಭವದಲ್ಲಿ ಅನೇಕ ಸ್ಪೂರ್ತಿದಾಯಕ ಮಹಿಳಾ ನಾಯಕರನ್ನು ಭೇಟಿಯಾಗಿದ್ದೇನೆ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಂಡವರು ಇದ್ದಾರೆ. ಈ ಮಹಿಳೆಯರು ಬಲವಾದ ಆತ್ಮವಿಶ್ವಾಸ, ಉತ್ಸಾಹ ಹೊಂದಿದ್ದಾರೆ. ಅಲ್ಲದೆ ನಾನು ಭೇಟಿಯಾಗಿದ್ದು ಅತ್ಯಂತ ಶಕ್ತಿಶಾಲಿ ಮಹಿಳೆಯರನ್ನ ಎಂದು ಭಾವಿಸುತ್ತೇನೆ. ಸಮ್ಮೇಳನದಲ್ಲಿ ಮಹಿಳೆಯರು ಪ್ರಸ್ತಾಪಿಸುವ ಹಾಗೂ ಚರ್ಚಿಸುವ ವಿಚಾರಗಳು ವಿಶ್ವ ಆರ್ಥಿಕತೆಗೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ. ಆ ಮೂಲಕ ಲಿಂಗ ಸಮಾನತೆಯ, ಮತ್ತು ಮಹಿಳಾ ಸಬಲೀಕರಣಕ್ಕೆ ಇಲ್ಲಿ ನಾಂದಿ ಹಾಡಲಾಗುತ್ತದೆ ಎಂದು ಭವಿಷ್ಯ ನುಡಿದರು.
ಐಪಿಎಸ್ ಅಧಿಕಾರಿಗಳಾದ ಡಾ. ರಶ್ಮಿ ಕೃಷ್ಣನ್, ಡಾ. ಕಲ್ಪನಾ ಗೋಪಾಲನ್, ಡಾ ಸೌಮ್ಯ ಮಿಶ್ರಾ ಭಾಗವಹಿಸಿದ್ರು. ವಿಶ್ವ ಮಹಿಳಾ ಸಮಾವೇಶ ಅಧ್ಯಕ್ಷೆ ಡಾ. ಕಾಮಿನಿ ಎ. ರಾವ್, (ಡಬ್ಲ್ಯೂಸಿಡಬ್ಲ್ಯೂ) ಕಾರ್ಯದರ್ಶಿ ಡಾ. ಪದ್ಮಿನಿ ಪ್ರಸಾದ್ ಅವರು ಭಾಗಿಯಾದ್ರು. .ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಭಾಗವಹಿಸಿದ್ದರು.
ವಲ್ರ್ಡ್ ಕಾಂಗ್ರೆಸ್ ಆನ್ ವುಮೆನ್ (ಡಬ್ಲ್ಯೂಸಿಡಬ್ಲ್ಯೂ) (ವಿಶ್ವ ಮಹಿಳಾ ಸಮಾವೇಶ) ಮಹಿಳೆಯರಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನ ಇಲ್ಲಿ ಸನ್ಮಾನಿಸಲಾಯಿತ್ತು. ವಿಶ್ವಾದ್ಯಂತ ವ್ಯವಹಾರ, ಉದ್ಯಮಶೀಲತೆ ಮತ್ತು ಕಾರ್ಪೊರೇಟ್ ನಾಯಕತ್ವ, ಆರೋಗ್ಯ ರಕ್ಷಣೆ, ಸಬಲೀಕರಣ, ತಂತ್ರಜ್ಞಾನ, ಕ್ರೀಡೆ, ಮತ್ತು ಹಿಂಸಾಚಾರದ ವಿರುದ್ಧ, ಅಸಮಾನತೆ ವಿರುದ್ಧ, ಬಾಲ್ಯ ವಿವಾಹದ ವಿರುದ್ಧ ಕೆಲಸ ಮಾಡಿ, ಯಶಸ್ಸು ಕಂಡ ಮಹಿಳೆಯರ ಕಥೆಗಳನ್ನ ಮತ್ತು ಅವರು ನೀಡಿದ ಸಂದೇಶಗಳಿಂದ ಪ್ರೇರಣೆ ಪಡೆದು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಏನಿದು ವರ್ಲ್ಡ್ ಕಾಂಗ್ರೆಸ್ ವುಮೆನ್ ಸಮಾವೇಶ !
ವರ್ಲ್ಡ್ ಕಾಂಗ್ರೆಸ್ ಆನ್ ವುಮೆನ್ – 2019 ಕಾರ್ಯಕ್ರಮದಲ್ಲಿ ಮಹಿಳೆಯರ ವಿಚಾರದಲ್ಲಿ ಹಿಂದೆ ನಡೆದಿರುವ ಘಟನೆಗಳ ಬಗ್ಗೆ ಚರ್ಚೆ ನಡೆಯಿತ್ತು. ಜೊತೆಗೆ ಮಹಿಳೆಯರ ಹಕ್ಕುಗಳಿಗಾಗಿ ಭವಿಷ್ಯದಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂದು ಚಿಂತನ ಮಂಥನವನ್ನು ನಡೆಸಲಾಯಿತ್ತು..
ವಲ್ರ್ಡ್ ಕಾಂಗ್ರೆಸ್ ಆನ್ ವುಮೆನ್ ಸಮ್ಮೇಳನದಲ್ಲಿ 50ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಿದ್ರು. ಮಹಿಳೆಯರಿಗೆ ಸಂಬಂಧಿಸಿದಂತಹ ಆರೋಗ್ಯ ಮತ್ತು ವೈಯಕ್ತಿಕ ಹಣಕಾಸು, ಕಾರ್ಯನಿರ್ವಾಹಕ ನಾಯಕತ್ವ, ಸಣ್ಣ ವ್ಯಾಪಾರ ಮತ್ತು ಉದ್ಯಮಶೀಲತೆ, ಕೆಲಸ ಜೀವನ ಸಮತೋಲನ, ಬ್ರ್ಯಾಂಡಿಂಗ್, ಸಾಮಾಜಿಕ ಮಾಧ್ಯಮ, ವ್ಯಾಪಾರ, ವೃತ್ತಿಪರ ಅಭಿವೃದ್ಧಿ ಮತ್ತು ವೈಯಕ್ತಿಕ ಬೆಳವಣಿಗೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಈ ಸಮ್ಮೇಳನದಲ್ಲಿ ಪ್ರಸ್ತಾಪವಾಯಿತ್ತು.
ವಿಶ್ವಾದ್ಯಂತ ಮಹಿಳೆಯರು ಒಂದಾಗಬೇಕಿದೆ. ಇಲ್ಲವಾದಲ್ಲಿ ಲಿಂಗ ಸಮಾನತೆ ತರಲು ಆಗುವುದಿಲ್ಲ. ಈ ಕಾರಣಕ್ಕಾಗಿ ಮಕ್ಕಳಿಗೆ ಲಿಂಗ ಸಮಾನತೆ ಬಗ್ಗೆ ತಿಳುವಳಿಕೆ ನೀಡುವ ಆಗತ್ಯವಿದೆ. ಸಮಾಜವನ್ನ ಬೇಗ ಬದಲಿಸಬೇಕಾದರೆ ವಿಶ್ವಾದ್ಯಂತ ಮಹಿಳೆಯರು ಒಂದಾಗಬೇಕು. ಪ್ರತಿವರ್ಷ ನಡೆಯುವ ವಲ್ರ್ಡ್ ಕಾಂಗ್ರೆಸ್ ಸಮ್ಮೇಳನದಲ್ಲಿ, ಮಹಿಳೆಯರು ಅವರ ನಾಯಕತ್ವ ಮತ್ತು ಅವರ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಲು, ಅಂತರಾಷ್ಟ್ರೀಯ ಕಾಂಗ್ರೆಸ್ ಉತ್ತಮ ಅವಕಾಶ ನೀಡುತ್ತದೆ. ವ್ಯಾಪಾರ, ಉದ್ಯಮಶೀಲತೆ, ಹಣಕಾಸು, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ,ಸಂಶೋಧನೆ, ಆರೋಗ್ಯ ರಕ್ಷಣೆ, ಸಲಹಾ, ವಕಾಲತ್ತು ಮತ್ತು ಮನರಂಜನೆ ಸೇರಿದಂತೆ ಅನೇಕ ಕ್ಷೇತ್ರಗಳ ಬಗ್ಗೆ ಈ ಸಮ್ಮೇಳನದಲ್ಲಿ ಗೋಷ್ಠಿಗಳನ್ನ ನಡೆಸಲಾಯಿತ್ತು. ಈ ವಿಚಾರಗಳನ್ನು ಸ್ವೀಕರಿಸಿ ಅವುಗಳ ಮೂಲಕ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನು ಗಮನ ಹರಿಸಲಾಗುತ್ತದೆ.