ಲಂಡನ್, ಜೂನ್ 11, 2019 (www.justkannada.in): ಕಳೆದ 2 ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಬಾಂಗ್ಲಾದೇಶ, ಕಳಪೆ ಲಯದಲ್ಲಿರುವ ಶ್ರೀಲಂಕಾ ವಿರುದ್ಧ ಗೆದ್ದು ಮತ್ತೆ ಜಯದ ಹಳಿಗೆ ಮರಳುವ ವಿಶ್ವಾಸದಲ್ಲಿದೆ.
ಕೌಂಟಿ ಮೈದಾನದಲ್ಲಿ ಮಂಗಳವಾರ ಬಾಂಗ್ಲಾದೇಶ, ಶ್ರೀಲಂಕಾ ವಿರುದ್ಧ ಸೆಣಸಲು ಸಜ್ಜಾಗಿದೆ. ವಿಶ್ವಕಪ್ ಕ್ರಿಕೆಟ್ನಲ್ಲಿ ಲಂಕಾ ವಿರುದ್ಧ ಬಾಂಗ್ಲಾದ ಈ ಹಿಂದಿನ ಸಾಧನೆ ನಗಣ್ಯ. ಈ ಹಿಂದೆ ಲಂಕಾ ಎದುರು ಆಡಿರುವ ೩ ಪಂದ್ಯಗಳಲ್ಲಿ ಬಾಂಗ್ಲಾದೇಶ ಸೋಲು ಕಂಡಿದೆ.
ಇದೀಗ ಈ ವಿಶ್ವಕಪನ್ನಲ್ಲಿ ಬಾಂಗ್ಲಾ ಜಯದ ಖಾತೆ ತೆರೆಯುವ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 21 ರನ್ ಗಳ ಜಯದೊಂದಿಗೆ ಉತ್ತಮ ಆರಂಭ ಪಡೆದಿದ್ದ ಬಾಂಗ್ಲಾದೇಶ, ನಂತರ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸೋಲುಂಡಿತ್ತು.
ವಿಶ್ವಕಪ್ನಲ್ಲಿ ಬಾಂಗ್ಲಾದೇಶ: ಶ್ರೀಲಂಕಾ ಪಂದ್ಯ: 03 | ಬಾಂಗ್ಲಾದೇಶ: 00 |ಶ್ರೀಲಂಕಾ: 03
ಸಂಭವನೀಯ ತಂಡಗಳು:
ಬಾಂಗ್ಲಾದೇಶ: ತಮೀಮ್, ಸರ್ಕಾರ್, ಶಕೀಬ್, ಮುಷ್ಫೀಕುರ್, ಮಿಥುನ್, ಮಹಮದುಲ್ಲಾ, ಮೊಸದೆಕ್, ಸೈಫುದ್ದೀನ್, ಮೆಹಿದಿ, ಮೊರ್ತಜಾ, ಮುಸ್ತಾಫಿಜುರ್.
ಶ್ರೀಲಂಕಾ: ದಿಮುತ್, ಕುಸಾಲ್ ಪೆರೇರಾ, ತಿರಿಮನ್ನೆ, ಕುಸಾಲ್ ಮೆಂಡೀಸ್, ಮ್ಯಾಥ್ಯೂಸ್, ಧನಂಜಯ, ತಿಸಾರ, ಉಡಾನ, ಲಕ್ಮಲ್, ಮಲಿಂಗಾ, ಪ್ರದೀಪ್.
ಪಿಚ್ ರಿಪೋರ್ಟ್: ಬ್ರಿಸ್ಟಲ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು ದೊಡ್ಡ ಮೊತ್ತ ನಿರೀಕ್ಷಿಸಬಹುದಾಗಿದೆ. ಈ ಪಿಚ್ನಲ್ಲಿ ನಡೆದ ಈ ಹಿಂದಿನ ೧೭ ಏಕದಿನ ಪಂದ್ಯಗಳಲ್ಲಿ ೭ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ.