ಇಂಗ್ಲೆಂಡ್, ಮೇ 28, 2019 (www.justkannada.in): ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 3ನೇ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಅವರಿಂದ ವಿಶಿಷ್ಟ ಸಾಧನೆಯೊಂದನ್ನು ನಿರೀಕ್ಷಿಸಲಾಗುತ್ತಿದೆ. ಅದೇ ಶತಕಗಳ ಹ್ಯಾಟ್ರಿಕ್! ಅರ್ಥಾತ್, ವಿಶ್ವಕಪ್ ಕೂಟದ ಮೊದಲ ಪಂದ್ಯದಲ್ಲೇ ಸತತ 3ನೇ ಸಲ ಸೆಂಚುರಿಯೊಂದನ್ನು ದಾಖಲಿಸುವುದು.
ವಿಶ್ವಕಪ್ ದಾಖಲೆ 2011ರಲ್ಲಿ ಮೊದಲ ವಿಶ್ವಕಪ್ ಆಡುವಾಗ ವಿರಾಟ್ ಕೊಹ್ಲಿ ತಂಡದ ಓರ್ವ ಸಾಮಾನ್ಯ ಸದಸ್ಯ. ಅಂದು ಭಾರತ ಢಾಕಾದಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಆರಂಭಿಕ ಪಂದ್ಯವಾಡಿತ್ತು. ಈ ಪಂದ್ಯದಲ್ಲಿ ಸೆಹವಾಗ್ 175 ರನ್ ಬಾರಿಸಿ ಮೆರೆದರೆ, ಕೊಹ್ಲಿ ಅಜೇಯ 100 ರನ್ ಹೊಡೆದು ಸಂಭ್ರಮಿಸಿದರು.
ಇದರೊಂದಿಗೆ ತಾನಾಡಿದ ಮೊದಲ ವಿಶ್ವಕಪ್ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತದ ಆಟಗಾರನೆಂಬ ಹಿರಿಮೆ ಕೊಹ್ಲಿ ಅವರದಾಯಿತು.
ಇನ್ನು 2015ರ ವಿಶ್ವಕಪ್ ವೇಳೆ ಪಾಕ್ ವಿರುದ್ಧವೂ ಕೊಯ್ಲಿ ಭರ್ಜರಿ ಶತಕ ದಾಖಲಿಸಿದ್ದರು. ಇದೀಗ ಈ ಬಾರಿಯ ಮೊದಲ ಪಂದ್ಯದಲ್ಲಿ ಕೊಯ್ಲಿ ಶತಕ ಸಿಡಿಸುವರೇ ಕಾದು ನೋಡಬೇಕಿದೆ.