ಮೈಸೂರು,ಮಾರ್ಚ್,1,2023(www.justkannada.in): ವಿಶ್ವ ಶ್ರವಣ ದಿನದ ಅಂಗವಾಗಿ ಮಾರ್ಚ್ 3 ರಂದು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.
ಮಾರ್ಚ್ 3ರಂದು ಮಧ್ಯಾಹ್ನ 2ರಿಂದ 3 ಗಂಟೆವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಲಿದ್ದು, ಶ್ರವಣ ದೋಷಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಐಶ್(AIISH) ಸಂಸ್ಥೆಯ ಶ್ರವಣ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ್ ಪ್ರಭು ಹಾಗೂ ಸಂವಹನ ನ್ಯೂನ್ಯತೆಗಳ ತಡೆಗಟ್ಟುವಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಾರಂಶ್ ಜೈನ್ ಪಾಲ್ಗೊಂಡು ಕಿವಿ ಹಾಗೂ ಶ್ರವಣ ಶಕ್ತಿಯ ಕುರಿತು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಶ್ರವಣತಜ್ಞರು ಹಾಗೂ ವಾಕ್-ಭಾಷಾ ತಜ್ಞರಾದ ಡಾ. ಅರುಣ್ ರಾಜ್ ಕೆ. ಅವರು ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ. 0821-250-2530 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಂಪನ್ಮೂಲ ವ್ಯಕ್ತಿಗಳ ಬಳಿ ಕಿವಿ ಹಾಗೂ ಶ್ರವಣಶಕ್ತಿಯ ಕುರಿತು ಪ್ರಶ್ನೆಗಳನ್ನ ಕೇಳಿ ಪರಿಹಾರೋಪಾಯಗಳನ್ನ ಪಡೆಯಬಹುದು.
Key words: World Hearing Day-mysore- AIISH-Direct -phone-in- program