ಮೈಸೂರು,ನವೆಂಬರ್,16,2024 (www.justkannada.in): ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ವತಿಯಿಂದ ನವೆಂಬರ್ 19ರಿಂದ 25ರವರೆಗೆ ವಿಶ್ವ ಪರಂಪರೆ ಸಪ್ತಾಹವನ್ನು ಆಯೋಜಿಸಲಾಗಿದೆ.
ಪುರಾತತ್ವ ಸಂಗ್ರಹಾಲಯಗಳು ಮತ್ತಿ ಪರಂಪರೆ ಇಲಾಖೆ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ ಮೈಸೂರು ಇಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿವಿಧ ಸ್ಪರ್ಧೆಗಳು ನಡೆಯಲಿವೆ.
ನೈಸರ್ಗಿಕ ಪರಂಪರೆ, ಪಾರಂಪರಿಕ ಸ್ಮಾರಕ , ಪಾರಂಪರಿಕ ಕಲೆ, ಇತರೆ ಪರಂಪರೆಯ ವಿಷಯಗಳ ಕುರಿತು ರಸಪ್ರಶ್ನೆ, ಸ್ಕೆಚಿಂಗ್, ಛಾಯಾಗ್ರಹಣ, ಚಿತ್ರಕಲೆ ಸ್ಪರ್ಧೆಯನ್ನ ಏರ್ಪಡಿಸಲಾಗಿದೆ. ನವೆಂಬರ್ 22 ರಂದು ಪಿಯುಸಿ ವಿದ್ಯಾರ್ಥಿಗಳಿಗೆ, ನವೆಂಬರ್ 23 ರಂದು 5ರಿಂದ 7ನೇ ತರಗತಿ ಮತ್ತು 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದೆ.
ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು, ತಮ್ಮ ಹೆಸರು ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನ msa.edu.in ಮೂಲಕ ಅಥವಾ ದೂರವಾಣಿ ಮುರಳೀಧರ್-ಮೊಬೈಲ್ ನಂಬರ್ 9113870169 ಹಾಗೂ ಕಚೇರಿ ಸ್ಥಿರ ದೂರವಾಣಿ 0821-2424671 /2424673 ಸಂಪರ್ಕಿಸಬಹುದಾಗಿದೆ.
Key words: World Heritage Week, Mysore, various, competitions