ಮೈಸೂರು,ಜೂನ್,1,2024 (www.justkannada.in): ಸಮುದಾಯ ವೈದ್ಯಶಾಸ್ತ್ರ ವಿಭಾಗ, ಜೆಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯ, ಜೆಎಸ್ ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ, ಮೈಸೂರು ಇವರ ವತಿಯಿಂದ ವಿಶ್ವತಂಬಾಕು ರಹಿತ ದಿನ ಆಚರಿಸಲಾಯಿತು.
ಇದರ ಅಂಗವಾಗಿ, ಮೈಸೂರಿನ ಹಾಂಚ್ಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿದ್ದ ಹಳೆಕೆಸರೆ ಮತ್ತು ಕೆರ್ಮಿಲ್ಸ್ ಕಾಲೋನಿನಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಮೊದಲನಿಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಜಾಥಾವನ್ನು ಹಮ್ಮಿ ಕೊಂಡಿದ್ದರು.
ಈ ಸಂಧರ್ಭದಲ್ಲಿ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಡಾ. ನಯನಬಾಯಿ ಶಾಬಾದಿ, ಸಹಾಯಕ ಪ್ರಾಧ್ಯಾಪಕಿ, ಡಾ. ಶ್ವೇತ, ಸೀನಿಯರ್ ಸ್ಟೂಡೆಂಟ್, ಸಿಬ್ಬಂದಿವರ್ಗದವರು, ಸ್ನಾತಕೋತರ ಪದವೀಧರರು, ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರು, ಹಾಂಚ್ಯಾ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಆಶಾಕಾರ್ಯಕರ್ತೆಯರು ಈ ಜಾಥಾವನ್ನುಉದ್ಘಾಟಿಸಿದರು.
“ತಂಬಾಕು ಉದ್ಯಮದ ಹಸ್ತಕ್ಷೇಪಗಳಿಂದ ಮಕ್ಕಳನ್ನು ರಕ್ಷಿಸುವುದು”ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಹಿನ್ನಲೆಯಲ್ಲಿ ಸಮಾಜಕ್ಕೆ ಅರಿವು ಮೂಡಿಸಲು ಮುಂದಿನ ಹೆಜ್ಜೆಯನ್ನಿಟ್ಟರು.
Key words: World, No Tobacco Day, Awareness, mysore