ಮೈಸೂರು ,ಮಾರ್ಚ್,20,2025 (www.justkannada.in): ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿ ಸಂತತಿ ಉಳಿವಿಗಾಗಿ ಜಾಗೃತಿ ಮೂಡಿಸುವ ಸಲುವಾಗಿ ಮೈಸೂರಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಮಾಡಲಾಯಿತು.
ನಗರದ ಮಹಾರಾಜ ಮೈದಾನದ ಮುಂಭಾಗ ಆಯೋಜಿಸಿದ್ದ ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮಕ್ಕೆ ಪಕ್ಷಿಗಳಿಗೆ ನೀರಿನ ಬೌಲು ಅಳವಡಿಸಿ ನೀರು ಹಾಗೂ ಆಹಾರ ಹಾಕುವ ಮೂಲಕ ನಟ ಆದಿ ಲೋಕೇಶ್ ಚಾಲನೆ ಕೊಟ್ಟರು.
ಇದೇ ವೇಳೆ ಪ್ರಕೃತಿ ಸಮತೋಲನಕ್ಕಾಗಿ ಗುಬ್ಬಚ್ಚಿಗಳನ್ನು ಉಳಿಸೋಣ, ಬೇಸಿಗೆಯ ಬಿಸಿಲಿನ ತಾಪದಿಂದ ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ, ಅಳಿದು ಹೋಗುತ್ತಿರುವ ಗುಬ್ಬಚ್ಚಿ ಸಂಕುಲಗಳ ಉಳಿವಿಗಾಗಿ ಜನಜಾಗೃತಿ ಮೂಡಿಸೋಣ ನಶಿಸಿ ಹೋಗುತ್ತಿರುವ ಗುಬ್ಬಚ್ಚಿ ಸಂಕುಲವನ್ನು ಸಂರಕ್ಷಿಸೋಣ ಎಂಬ ಘೋಷವಾಕ್ಯ ನಾಮಫಲಕದ ಮೂಲಕ ಪಕ್ಷಿಗಳ ಸಂರಕ್ಷಣೆಯ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ವನ್ಯಜೀವಿ ಮಂಡಳಿಯ ರಾಜ್ಯ ಸದಸ್ಯಡಾ. ಸಂತೃಪ್ತಿ ಗೌಡ, ಕೆ ಆರ್ ವಿಭಾಗದ ಉಪ ಪೊಲೀಸ್ ಆಯುಕ್ತ ರಮೇಶ್ ಕುಮಾರ್, ಉರುಗ ತಜ್ಞ ಸ್ನೇಕ್ ಶ್ಯಾಮ್, ಸೌಮ್ಯ ಆದಿ ಲೋಕೇಶ್, ಕಿರುತರೆ ನಟ ಮಹೇಂದರ್, ಎನ್ ಎಂ ನವೀನ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವೈದ್ಯ ಶ್ರೀನಿವಾಸ್ ಆಚಾರ್, ಶ್ರೀನಿವಾಸ್ ಭಾಷ್ಯಂ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ಚಕ್ರಪಾಣಿ, ಸುಚೇಂದ್ರ, ಮಹಾನ್ ಶ್ರೇಯಸ್, ಮಿರ್ಲೆ ಪನಿಷ್, ರಾಕೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Key words: World Sparrow Day, celebrated, Mysore