ಬೆಂಗಳೂರು, ಜೂನ್ 15, 2021 (www.justkannada.in): ಮುಂದಿನ ಚಾಂಪಿಯನ್‌ಶಿಪ್‌ನಲ್ಲಿ ಪ್ರತಿ ಟೆಸ್ಟ್‌ಗೆ ಒಂದೇ ಪಾಯಿಂಟ್ಸ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ.
ಈ ವಿಷಯವನ್ನು ಐಸಿಸಿ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜೆಫ್ ಅಲಾರ್ಡಿಸ್ ತಿಳಿಸಿದ್ದಾರೆ.
ಹೌದು. ಡಬ್ಲ್ಯೂಟಿಸಿ ಫೈನಲ್ಗೂ ಮುನ್ನ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮಹತ್ತರ ಬದಲಾವಣೆಗೆ ಐಸಿಸಿ ಮುಂದಾಗಿದೆ!
ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಮುಂದುವರೆಸಲು, ಎಲ್ಲರಿಗೂ ಸಮಾನವಾಗಿಸಲು ಮತ್ತು ಅದರಲ್ಲಿ ಉತ್ಸಾಹವನ್ನು ಉಳಿಸಿಕೊಳ್ಳಲು ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಪಾಯಿಂಟ್ ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ಐಸಿಸಿ ಪರಿಗಣಿಸಲು ಇದು ಕಾರಣವಾಗಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿ ಅಥವಾ ಐದು ಟೆಸ್ಟ್ ಸರಣಿಯೇ ಎಂಬುದು ಮುಖ್ಯವಲ್ಲ. ಆಡುವ ಪ್ರತಿಯೊಂದು ಪಂದ್ಯಕ್ಕೂ ಸಮಾನ ಅಂಕಗಳು ಲಭ್ಯವಿರುತ್ತವೆ. ಆದಾಗ್ಯೂ, ಪ್ರತಿ ತಂಡ ಒಟ್ಟು ಅಂಕಗಳಿಗೆ ಬದಲಾಗಿ ಅವರ ಗೆಲುವಿನ ಅಂಕಗಳ ಶೇಕಡಾವಾರು ಆಧಾರದ ಮೇಲೆ ತೀರ್ಮಾನಿಸಲ್ಪಡುತ್ತದೆ.