ಮೈಸೂರು,ಮಾರ್ಚ್,30,2022(www.justkannada.in): ಮೈಸೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ಇಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸೈಕಲ್ ಮ್ಯಾರಥಾನ್ ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ”K .H ಪ್ರಸಾದ್ ಚಾಲನೆ ನೀಡಿದರು.
ಸೈಕಲ್ ಮ್ಯಾರಥಾನ್ ದೇವಸ್ಥಾನದಿಂದ ಹೊರಟು ದೊಡ್ಡ ಗಡಿಯಾರ ವೃತ್ತ, ಪ್ರಭಾ ಟಾಕೀಸ್ ರಸ್ತೆ ನಂತರ ಸಯ್ಯಜಿ ರಾವ್ ರಸ್ತೆ ಮೂಲಕ ಜೆ. ಕೆ ಮೈದಾನದಲ್ಲಿ ಕೊನೆಗೊಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ”K .H ಪ್ರಸಾದ್ ಮೈಸೂರು ಜಿಲ್ಲೆಯಲ್ಲಿ ಕಳೆದ ವರ್ಷಗಳ ಸರಾಸರಿ ನೋಡಿದರೆ 4 ಸಾವಿರ ಕ್ಷಯರೋಗ ಕಂಡು ಬಂದಿದೆ. ಹಾಗೆ ಪ್ರತಿ ವರ್ಷ 3 ರಿಂದ 4 ಸಾವಿರ ಹೆಚ್ಚಾಗುತ್ತಿದೆ. ಒಬ್ಬ ವ್ಯಕ್ತಿಗೆ ಕ್ಷಯರೋಗ ಬಂದರೆ ಅದು 40 ಜನರಿಗೆ ಹರಡುತ್ತದೆ. ಶೇಕಡಾ 7ರಿಂದ 8 % ಜನರು ಮರಣ ಹೊಂದಿದ್ದಾರೆ ಕ್ಷಯ ರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ಬಡವರಿಗೆ ತಿಂಗಳಿಗೆ 500 ರೂ. ರೂಪಾಯಿ ನೀಡಲಾಗುತ್ತದೆ ಎಂದರು.
ಹಿಂದಿನಿಂದಲೂ ಕ್ಷಯರೋಗದ ವಿರುದ್ಧ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಕರ್ನಾಟಕವನ್ನು 2025ಕ್ಕೆ ಕ್ಷಯರೋಗಮುಕ್ತ ರಾಜ್ಯ ಮಾಡಬೇಕು. ಕ್ಷಯ ರೋಗಕ್ಕೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಕ್ಷಯ ರೋಗಗುಣಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದರೇ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದರು.
Key words: World Tuberculosis Day-Awareness – Cycle Marathon – Mysore