ಮೈಸೂರು, ಮಾರ್ಚ್ 23, 2023 (www.justkannada.in): ನಗರದ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಶಾಸ್ತ್ರ ವಿಭಾಗ ಜೆಎಸ್ ಎಸ್ ನರ್ಸಿಂಗ್ ಕಾಲೇಜು, ಬಂಬೂ ಬಜಾರ್ ಮ ಮೇದಾರ ಬ್ಲಾಕ್ ನ ಜೆಎಸ್ ಎಸ್ ಅರ್ಬನ್ ಹೆಲ್ತ್ ಸಹಯೋಗದೊಂದಿಗೆ ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಯಿತು.
ಜೆಎಸ್ ಎಸ್ ಅರ್ಬನ್ ಹೆಲ್ತ್ ಸೆಂಟರ್ ನ ಮೆಡಿಕಲ್ ಆಫೀಸರ್ ಡಾ.ಎಚ್.ವಿ.ರಮಾ, ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಪಕ ನಿಂಗರಾಜು ಕಾರ್ಯಕ್ರಮಕ್ಕೆ ಪ್ರಯುಕ್ತ ಆಯೋಜಿಸಿದ್ದ ಜಾಗೃತಿ ಜಾಥಾ ಚಾಲನೆ ನೀಡಿದರು. ಇದೇ ವೇಳೆ ಜೆಎಸ್ ಎಸ್ ನಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಷಯ ನಿರ್ಮೂಲನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಈ ವೇಳೆ ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ.ಮೊಹಮ್ಮದ್ ಶಿರಾಜ್ ಅಹಮದ್ ಅವರು ಪ್ರಸ್ತುತ ಸನ್ನಿವೇಶ, ಟಿಬಿ ರೋಗಲಕ್ಷಣಗಳು, ಚಿಕಿತ್ಸೆಯ ಕಟ್ಟುಪಾಡುಗಳ ಬಗ್ಗೆ ಮಾತನಾಡಿದರು. ನಿಕ್ಷಯ್ ಪೋಶನ್ ಅಡಿಯಲ್ಲಿ ನೀಡಲಾದ ಪ್ರೋತ್ಸಾಹಗಳ ಬಗ್ಗೆ ವಿವರಿಸಿದರು. ಡಾ.ಪ್ರವೀಣ್ ಕುಲಕರ್ಣಿ ಅವರು ಕ್ಷಯರೋಗದ ಬಗ್ಗೆ ಪ್ರೇಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಇದೇ ವೇಳೆ ಡಾ.ಮೊಹಮ್ಮದ್ ಶಿರಾಜ್ ಅಹಮದ್, ಜೆಎಸ್ಎಸ್ ನಗರ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಎಚ್ ಬಿ, ಸಂತೋಷ್, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ವಿ.ಸಂಪತ್, ಡಿಟಿಸಿಯ ಟಿಬಿ ಆರೋಗ್ಯ ಸಂದರ್ಶಕರು ಉಮೇಶ್ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಜೆಎಸ್ಎಸ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಂಗರಾಜು ಬರೆದ ಟಿಬಿ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸಲು ಕಿರುನಾಟಕ ಪ್ರದರ್ಶಿಸಲಾಯಿತು.
ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶ್ವೇತಾಶ್ರೀ ಎಂ, ಮತ್ತು ಡಾ.ಕಾವ್ಯ ಜಿ.ಯು, ಡಾ.ಮೈಥಿಲಿ ಎಂ.ಆರ್, ಡಾ.ಸುನೀತಾ ಸಿಂಗ್ ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಕರಾದ ಶ್ರೀ ಸಂತೋಷ್ ಎಚ್ ಬಿ ಮತ್ತು ಶ್ರೀ ಸುನಿಲ್ ವೈ ಎಸ್, ಮಲ್ಲಿಕಾರ್ಜುನ ಸ್ವಾಮಿ ಇತರರು ಇದ್ದರು.