ರಾಯಚೂರು,ಜು,22,2020(www.justkannada.in): ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಮಂತ್ರಾಲಯದಲ್ಲಿ ಆಗಸ್ಟ್ 2ರಿಂದ 8ರವರೆಗೆ ಒಂದು ವಾರಗಳ ಕಾಲ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಸಪ್ತರಾತ್ರೋತ್ಸವ ಆಯೋಜಿಸಲಾಗಿದೆ. ಶ್ರೀ ರಾಘವೇಂದ್ರ ಗುರು ಸಾರ್ವಬೌಮರ 349 ನೇ ಆರಾಧನಾ ಸಪ್ತರಾತ್ರೋತ್ಸವ ಸಿದ್ದತೆ ನಡೆಸಲಾಗುತ್ತಿದ್ದು, ಭಕ್ತರಿಗೆ ಆನ್ ಲೈನ್ ನಲ್ಲಿ ಪಾಲ್ಗೊಳಲು ಅವಕಾಶ ನೀಡಲಾಗಿದೆ.
ಈ ಕುರಿತು ಶ್ರೀ ಮಠದ ವ್ಯವಸ್ಥಾಪಕರಾದ ವೆಂಕಟೇಶ್ ಜೋಶಿ ಮಾಹಿತಿ ನೀಡಿದ್ದಾರೆ. ಕೊರೋನಾ ಹಿನ್ನೆಲೆ ಅನೇಕ ರಾಜ್ಯಗಳಲ್ಲಿ ಹೊರ ರಾಜ್ಯದ ಪ್ರವೇಶ ನಿಷೇಧವಿರುವುದರಿಂದ ಹಾಗೂ ದಿನೇ ದಿನೇ ಕೊರೊನಾ ಪ್ರಕರಣಗಳು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಟ್ಟು ನಿಟ್ಟಿನ ನಿರ್ಬಂಧವಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಆರಾಧನಾ ಮಹೋತ್ಸವ ವು ಶ್ರೀ ಮಠದ ಒಳಾಂಗಣದಲ್ಲಿ ಸಂಪ್ರದಾಯಕವಾಗಿ ಆಚರಿಸಲಾಗುವುದು ಹಾಗು 50 ಕ್ಕೂ ಕಡಿಮೆ ಸೀಮಿತ ಪರಿವಾರದೊಂದಿಗೆ ಆರಾಧನೆ ನಡೆಸುವ ಅನಿವಾರ್ಯ ಇರುವುದರಿಂದ ಸಮಸ್ತ ಗುರುರಾಯರ ಭಕ್ತರು ತಮ್ಮ ಸ್ಥಳ ದಲ್ಲಿಯೇ ಇದ್ದು ಗುರು ಸಾವ೯ಬೌಮರ ಸ್ಮರಣೆ ಮಾಡಿ ಆರಾಧನೆ ಆಚರಿಸಿ ಅನುಗ್ರಹ ಕ್ಕೆ ಪಾತ್ರ ರಾಗಬೇಕೆಂದು ಶ್ರೀ ಮಠದ ವ್ಯವಸ್ಥಾಪಕರಾದ ವೆಂಕಟೇಶ್ ಜೋಶಿ ತಿಳಿಸಿದರು.
ಆರಾಧನಾ ಸಪ್ತರಾತ್ರೋತ್ಸವ ಅಂಗವಾಗಿ ನಡೆಯುವ ಎಲ್ಲ ಧಾರ್ಮಿಕ ಆಧ್ಯಾತ್ಮಿಕ ಕಾಯ೯ಕ್ರಮಗಳು ವಿಶೇಷ ಉತ್ಸವ ಪ್ರವಚನ ಇತ್ಯಾದಿ ಎಲ್ಲಾ ಕಾಯ೯ಕ್ರಮಗಳು ಶ್ರೀ ಮಠದ ಅಧಿಕೃತ ಯುಟ್ಯೂಬ್ ಚಾನಲ್ ಆದ ಮಂತ್ರಾಲಯವಾಹಿನಿ ಯಲ್ಲಿ ನೇರ ಪ್ರಸಾರ ಮಾಡಲಾಗುವುದು ಹಾಗು ಆರಾಧನೆ ಮುಗಿದ ಮೇಲೆ ಕೊರೊನಾ ಭಾದೆ ಪೂರ್ಣಗೊಂಡ ನಂತರ ಆರಾಧನಾ ಸಂಸ್ಮರಣೋತ್ಸವ ಎಂಬ ಹೆಸರಿನಿಂದ ಕಾಯ೯ಕ್ರಮ ರೂಪಿಸಿ ಸಮಸ್ತ ಭಕ್ತರು ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಕೊರೊನಾ ಆತಂಕ ಕಾರ್ಮೋಡವಾಗಿ ವ್ಯಾಪಿಸಿದ್ದರಿಂದ ಅದನ್ನ ಗೆದ್ದು ಎಲ್ಲ ಕೈಂಕಯ೯ಗಳನ್ನು ಸುಗಮವಾಗಿ ಮಾಡಬೇಕಾಗಿದೆ .ಈ ಎಲ್ಲ ಅಭಿಯಾನಕ್ಕೆ ತಾವುಗಳು ಖುದ್ದಾಗಿ ಹಾಜಿರಲು ಸಾಧ್ಯವಾಗುವುದಿಲ್ಲ ಆದ್ದರಿಂದ online ಅಥವಾ ಚೆಕ್ .ಡಿಡಿ ಮೂಲಕ ತನುಮನ ಧನದಿಂದ ಪಾಲ್ಗೊಂಡು ರಾಯರ ಅನುಗ್ರಹ ಕ್ಕೆ ಅವಕಾಶವಿದೆ ಮತ್ತು ಕೊರೊನಾ ಕಾರಣದಿಂದ ಸದ್ಯ ಯಾವುದೆ ವಸತಿ ಮುಂತಾದ ಸೌಲಭ್ಯಗಳಿರುವುದಿಲ್ಲ ಭಕ್ತರು ಸಹಕರಿಸಲು ಕೋರಲಾಗಿದೆ ಎಂದು ವೆಂಕಟೇಶ್ ಜೋಶಿ ಮನವಿ ಮಾಡಿದ್ದಾರೆ.
Key words: worship- festival -Mantralaya -Sriraghavendra Swamy-devotees – online.