ಮೈಸೂರು, ಸೆಪ್ಟಂಬರ್,3,2020(www.justkannada.in): ಕೊರೋನಾ ಮಹಾಮಾರಿ ಹಿನ್ನೆಲೆ ಮೈಸೂರು ಚಾಮುಂಡಿಬೆಟ್ಟದ ದೇಗುಲದಲ್ಲಿ ಶುಕ್ರವಾರಗಳ ದರ್ಶನ, ಪೂಜೆ ಮತ್ತು ಸೇವೆಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿತ್ತು. ಇದೀಗ ಚಾಮುಂಡಿ ಬೆಟ್ಟದಲ್ಲಿ ಪೂಜಾ ಸೇವೆಗಳನ್ನು ಪುನರಾರಂಭ ಮಾಡಲಾಗಿದ್ದು, ಭಕ್ತಸಾಗರ ಹರಿದು ಬರುತ್ತಿದೆ.
ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರದ ಪೂಜೆ, ಸೇವೆಗಳು ಮತ್ತೆ ಕಳೆಗಟ್ಟಿದ್ದು, ಮತ್ತೆ ಪೂಜಾ ಸೇವೆಗಳ ಪ್ರಾರಂಭವಾದ ಹಿನ್ನೆಲೆ ಭಕ್ತ ಸಾಗರ ದೇವಾಲಯಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸರ್ಕಾರದ ಆದೇಶದ ಮೇರೆಗೆ ಹಿಂದಿನಂತೆ ಪೂಜಾ ಸೇವೆಗಳನ್ನು ದೇವಸ್ಥಾನ ಆಡಳಿತ ಮಂಡಳಿ ಪ್ರಾರಂಭಿಸಿದೆ.
ದೇವಾಲಯದಲ್ಲಿ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಸೇವೆಗಳಿಗೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮೈಸೂರಿನಲ್ಲಿ ಕೊರೋನಾ ಮಹಾಮಾರಿ ಹೆಚ್ಚಾದ ಹಿನ್ನೆಲೆ ಶುಕ್ರವಾರಗಳ ದರ್ಶನ, ಪೂಜೆ ಮತ್ತು ಸೇವೆಗಳಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿತ್ತು. ಇಲ್ಲಿಯವರೆಗೂ ಕೇವಲ ಸೋಮವಾರದಿಂದ ಗುರುವಾರದವರೆಗೂ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
Key words: Worship- services- again –mysore- Chamundi Hill-Devotee