ಲಂಡನ್, ಜುಲೈ 22, 2019 (www.justkannada.in): ವಿಶ್ವಕಪ್ ಫೈನಲ್ನಲ್ಲಿ ತಪ್ಪು ನಿರ್ಣಯದ ಬಗ್ಗೆ ಅಂಪೈರ್ ಆಗಿದ್ದ ಶ್ರೀಲಂಕಾದ ಕುಮಾರ ಧರ್ಮಸೇನ ತಪ್ಪೊಪ್ಪಿಕೊಂಡಿದ್ದಾರೆ.
ಫೈನಲ್ ಪಂದ್ಯದ ಕೊನೆಯ ಓವರ್ನಲ್ಲಿ ಓವರ್ ಥ್ರೋ ಒಂದಕ್ಕೆ ಐದು ರನ್ ಬದಲು ಆರು ನೀಡಿದ್ದು ತಪ್ಪು ಎಂದು ಅವರು ಒಪ್ಪಿಕೊಂಡಿದ್ದಾರೆ.
ಏಕೆಂದರೆ ಬೆನ್ ಸ್ಟೋಕ್ಸ್ ಎರಡನೇ ರನ್ ತೆಗೆದುಕೊಳ್ಳಲು ಡೈವ್ ಮಾಡುವಾಗ ಬ್ಯಾಟಿಗೆ ತಗಲಿ ಚೆಂಡು ಬೌಂಡರಿಗೆ ಹೋಗಿತ್ತು.
ಆಗ ಬಾಲ್ ಒಗೆಯುವಾಗ ಇಬ್ಬರು ಬ್ಯಾಟ್ಸ್ಮನ್ಗಳು ಒಬ್ಬರಿಗೊಬ್ಬರು ದಾಟಿದ್ದಿಲ್ಲ. ಇದನ್ನು ನೋಡದ ಧರ್ಮಸೇನ ಆರು ರನ್ ನೀಡಿದ್ದರು. ಅದನ್ನು ನಂತರ ಮರುಪ್ರಸಾರದಲ್ಲಿ ನೋಡಿದಾಗ ತಪ್ಪು ಮಾಡಿದ್ದೇನೆಂದು ಗೊತ್ತಾಯಿತು ಎಂದು ಹೇಳಿದ್ದಾರೆ.