ಯಾದಗಿರಿ:ಜುಲೈ-14:(www.justkannada.in) ರೈಲಿನಲ್ಲಿ ಸೀಟು ಹಿಡಿಯಲು ಹೋಗಿ ವ್ಯಕ್ತಿಯೊಬ್ಬ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಯಾದಗಿರಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಯರಗೋಳ ಗ್ರಾಮದ ನಂದು ಬಡಿಗೇರ್ ಅಪಘಾತಕ್ಕೀಡಾದ ವ್ಯಕ್ತಿ. ಸೋಲ್ಲಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೋಲ್ಲಾಪುರ ಎಕ್ಸ್ಪ್ರೆಸ್ ಶನಿವಾರ ತಡರಾತ್ರಿ ಯಾದಗಿರಿ ರೈಲು ನಿಲ್ದಾಣ ತಲುಪುತ್ತಿದ್ದಂತೆ ರೈಲು ಏರಲು ಪ್ರಯತ್ನಿಸಿದ ನಂದು, ಆಯತಪ್ಪಿ ರೈಲು ಮತ್ತು ಪ್ಲಾಟ್ಫಾರಂ ನಡುವೆ ಸಿಲುಕಿಕೊಂಡಿದ್ದಾನೆ. ಈ ವೇಳೆ ಆತನೆರಡು ಕಾಲುಗಳು ನಜ್ಜುಗುಜ್ಜಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂದು ಅವರನ್ನು ಆರ್ಪಿಎಫ್ ಸಿಬ್ಬಂದಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕಾಲುಗಳು ಸಂಪೂರ್ಣ ನುಜ್ಜುಗುಜ್ಜಾದ ಹಿನ್ನಲೆಯಲ್ಲಿ ಕಲನ್ನೇ ಕಳೆದೊಂಡಿದ್ದಾರೆ.