ಯಾದಗಿರಿ,ಜನವರಿ,19,2023(www.justkannada.in): ವೋಟ್ ಬ್ಯಾಂಕ್ ಆಧಾರದಲ್ಲಿ ಹಿಂದಿನ ಸರ್ಕಾರ ಉತ್ತರ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡಿದೆ. ನಿಮ್ಮನ್ನ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಬಿಜೆಪಿಯದ್ದು ಮೊದಲ ಆದ್ಯತೆ ವೋಟ್ ಬ್ಯಾಂಕ್ ಅಲ್ಲ. ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಹೇಳಿದರು.
ಯಾದಗಿರಿ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲಿವರೆಗೆ ಕಣು ಹಾಯಿಸಿದರೂ ಅಲ್ಲಿವರೆಗೆ ಜನ ಕಾಣುತ್ತಿದ್ದಾರೆ. ಯಾದಗಿರಿ ಸಮೃದ್ಧ ಇತಿಹಸವನ್ನ ಹೊಂದಿದೆ. ರಟ್ಟಿಗಳ್ಳಿ ಕೋಟೆ ನಮ್ಮ ಪೂರ್ವಜರ ಪ್ರತೀಕವಾಗಿದೆ. ಸುರಪುರದ ರಾಜ ವೆಂಕಟಪ್ಪ ನಾಯಕ ಸ್ವಾತಂತ್ರಕ್ಕೆ ಹೋರಾಟ ಮಾಡಿದರು ಎಂದು ಸ್ಮರಿಸಿದರು.
ಯಾದಹಿರಿ ಜಿಲ್ಲೆಯ ಸಾಮರ್ಥ್ಯ ಹೆಚ್ಚಿದೆ. ಯಾದಗಿರಿ ಸಾಮಾನ್ಯವೇ ಅಲ್ಲ. ಈ ಕ್ಷೇತ್ರ ಹಿಂದುಳಿಯಲು ಹಿಂದಿನ ಸರ್ಕಾರಗಳೇ ಕಾರಣ. ವೋಟ್ ಬ್ಯಾಂಕಿಂಗ್ ರಾಜಕಾರಣದಿಂದ ಹಿನ್ನೆಡೆಯಾಯಿತು . ಈಗಿನ ಸರ್ಕಾರದಿಂದ ಕರ್ನಾಟಕ ಮತ್ತಷ್ಟು ಅಭಿವೃದ್ದಿಯಾಗುತ್ತಿದೆ. ಇದೀಗ ಕರ್ನಾಟಕದಲ್ಲಿ ವಿಕಾಸ ಪರ್ವ ಆರಂಭವಾಗಿದೆ. ಬಿಜೆಪಿ ಸರ್ಕಾರದಲ್ಲಿ ವೋಟ್ ಬ್ಯಾಂಕ್ ರಾಜಕಾರಣವೇ ಇಲ್ಲ. ನಮ್ಮ ಆದ್ಯತೆ ಅಭಿವೃದ್ದಿ ಜೊತೆ ವಿಕಾಸದ ಮಂತ್ರ. ಹಿಂದಿನ ಸರ್ಕಾರಗಳು ಕೇವಲ ಘೋಷಣೆಗಳನ್ನ ಮಾಡಿದ್ದವು,. ಹಿಂದುಳಿದ ಜಿಲ್ಲೆ ಎಂದು ನಿರ್ಲಕ್ಷ್ಯ ಮಾಡಿದವು. ವೋಟ್ ಬ್ಯಾಂಕ್ ಆಧಾರದಲ್ಲಿ ಉತ್ತರ ಕರ್ನಾಟಕವನ್ನ ನಿರ್ಲಕ್ಷ್ಯಸಿದ್ದವು. ಉತ್ತರ ಕರ್ನಾಟಕ ಸಮೃದ್ಧಿಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲ. ಉತ್ತರ ಕರ್ನಾಟಕದ ಅಭಿವೃದ್ದಿಯೇ ಬಿಜೆಪಿಯ ಗುರಿ. ನಾವು ಕೊಟ್ಟಿದ್ದ ಭರವಸೆಗಳನ್ನ ಈಡೇರಿಸುತ್ತಿದ್ದೇವೆ. ದೇಶದ ಹಲವೆಡೆ ಉತ್ತಮ ಆಡಳಿತ ಕೊಟ್ಟಿದ್ದೇವೆ. ಯಾದಗಿರಿಯಲ್ಲಿ ಹೊಸ ಉದ್ಯೋಗ ಸೃಷ್ಠಿಯಾಗುತ್ತಿದೆ . ಅಭಿವೃದ್ದಿಯಲ್ಲಿ 100 ಜಿಲ್ಲೆಗಳಲ್ಲಿ ಯಾದಗಿರಿ ಟಾಪ್ 10ರಲ್ಲಿದೆ. ಈ ಸಾಧನೆಗೆ ಕಾರಣರಾದ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ಉಪಯೋಗವವಿದೆ ಕೊರೋನಾ ವೇಳೆ ರಾಜ್ಯ ಸರ್ಕಾರ ಕೇಂದ್ರದ ಜೊತೆ ಕೈಜೋಡಿಸಿದೆ. ರೈತರಿಗೆ ಕೇಂದ್ರ 6 ಸಾವಿರ ಜೊತೆಗೆ ರಾಜ್ಯ ಸರ್ಕಾರ 4 ಸಾವಿರ ರೂ ಕೊಡುತ್ತಿದೆ. ಸಾವಿರಾರು ಕೋಟಿ ವೆಚ್ಚದ ಯೋಜನೆಗಳಿಗೆ ಇಂದು ಚಾಲನೆ ನೀಡಿದ್ದೇವೆ. ನೀರಾವರಿ ಯೋಜನೆ ಮೂಲಕ ಜನರನ್ನ ಮುಟ್ಟುತ್ತಿದ್ದೇವೆ. ಹನಿನೀರಾವರಿ ಕೃಷಿ ಪದ್ದತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಹರ್ ಘರ್ ಜಲ್ ಯೋಜನೆ ಮೂಲಕ ಹೊಸ ಕ್ರಾಂತಿ ಸೃಷ್ಠಿಯಾಗಿದೆ . ದೇಶದ ಕೋಟಿ ಕೋಟಿ ಜನರಿಗೆ ಉಪಯೋಗವಾಗಿದೆ. ಮುಂದಿನ 25 ವರ್ಷಗಳ ಸಂಕಲ್ಪ ಇಟ್ಟುಕೊಂಡು ಮುನ್ನುಗ್ಗುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: yadgir-bjp-PM –Narendra modi-congress