ಯಾದಗಿರಿ,ನ,20,2019(www.justkannada.in): ರೈಲ್ವೆ ಹಳಿ ಬಿಟ್ಟು ಪ್ಲಾಟ್ ಫಾರ್ಮ್ ಗೆ ಗೂಡ್ಸ್ ರೈಲು ನುಗ್ಗಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ನಡೆದಿದೆ.
ರಸಗೊಬ್ಬರ ಅನ್ ಲೋಡ್ ಮಾಡಲು ಸ್ಟೇಷನ್ ಗೆ ಗೂಡ್ಸ್ ರೈಲು ಬಂದಿತ್ತು. ಈ ನಡುವೆ ಗೂಡ್ಸ್ ಯಾರ್ಡ್ ಬಳಿ ರಿವರ್ಸ್ ತೆಗೆದುಕೊಳ್ಳಲು ಲೋಕೋ ಪೈಲೆಟ್ ಮುಂದಾಗಿದ್ರು. ಹಿಂಬದಿ ಸಿಗ್ನಲ್ ನೀಡದ ಹಿನ್ನೆಲೆ ಲೋಕೋ ಪೈಲೆಟ್ ನಿಲ್ದಾಣಕ್ಕೆ ನುಗ್ಗಿಸಿದ್ದಾರೆ. ಇದರಿಂದಾಗಿ, ಪ್ಲಾಟ್ ಫಾರ್ಮ್ ನಲ್ಲಿದ್ದ ಒಂದು ಮಳಿಗೆಗೆ ಹಾನಿಯಾಗಿದೆ. ರೈಲು ನುಗ್ಗಿದ ರಭಸಕ್ಕೆ ಮಳಿಗೆ ಹತ್ತು ಫೀಟ್ ಮುಂದೆ ಸರಿದಿದೆ.
ಇನ್ನು ಅಂಗಡಿಯಲ್ಲಿದ್ದ ಕೆಲಸಗಾರ ದೇವೇಂದ್ರಪ್ಪ ರೈಲು ಬರುತ್ತಿರೋದನ್ನ ನೋಡಿ ಹೋರ ಓಡಿ ಜೀವ ಉಳಿಸಿಕೊಂಡಿದ್ದಾರೆ. ರೈಲು ಅಂಗಡಿಗೆ ಗುದ್ದಿದ ರಭಸಕ್ಕೆ ಪ್ಲಾಟ್ ಫಾರ್ಮ್ ನಲ್ಲಿ ನಿಂತಿದ್ದ ಪ್ರಯಾಣಿಕರು ಆತಂಕಗೊಂಡಿದ್ದರು. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: yadgir- Goods Train – Flat Farm