ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ, ಸರ್ಕಾರದ ಖಜಾನೆ ಸಂಪೂರ್ಣ ಖಾಲಿ : ಯದುವೀರ್‌

Govt doesn't have money to close potholes, govt treasury is completely empty: Yaduveer

 

ಮೈಸೂರು, ಜು.12,2024: (www.justkannada.in news) ಮುಡಾ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ. ಸಂಸದ ಯದುವೀರ್ ಹೇಳಿಕೆ. ಸರ್ಕಾರದ ಆಡಳಿತ ಯಂತ್ರ ವಿಫಲವಾಗಿದೆ. ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲ. ಡೆಂಗ್ಯೂ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಸರ್ಕಾರದ ಖಜಾನೆ ಸಂಪೂರ್ಣ ಖಾಲಿ ಆಗಿದೆ.

ಗ್ಯಾರಂಟಿ ಯೋಜನೆಗಾಗಿ ಸರ್ಕಾರದ ಖಜಾನೆ ಖಾಲಿ ಆಗಿದೆ. ಮೈಸೂರು ಸಂಸ್ಥಾನದಿಂದ ಇಂದಿನವರೆಗೂ ನಮ್ಮ ರಾಜ್ಯ ಪ್ರಗತಿಪರವಾಗಿತ್ತು. ಈಗ ನಮ್ಮ ರಾಜ್ಯ ಆರ್ಥಿಕವಾಗಿ ಹಿಂದುಳಿಯುತ್ತಿದೆ. ಈ ಭ್ರಷ್ಟ ಸರ್ಕಾರದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ.

ಸಿಎಂ ಮೈಸೂರನ್ನು ಪ್ರತಿಷ್ಠೆಯಾಗಿ ತೆಗದುಕೊಳ್ತಾರೆ. ಆದರೆ ಭ್ರಷ್ಟಾಚಾರ ಕಡಿಮೆ ಮಾಡಲು ಪ್ರತಿಷ್ಠೆ ಇಲ್ಲ. ಮುಡಾ ಹಗರಣವನ್ನ ಸಿಬಿಐಗೆ ವಹಿಸಬೇಕು. ಈ ಬಗ್ಗೆ ಸಂಪೂರ್ಣ ತನಿಖೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಪ್ರತಿಭಟನೆಯಲ್ಲಿ ಸಂಸದ ಯದುವೀರ್ ಹೇಳಿಕೆ.

ಸಿಎಂ ಗೆ ನೈತಿಕ ಹಕ್ಕಿಲ :

ಮುಡಾ ಹಗರಣ ಖಂಡಿಸಿ ಬಿಜೆಪಿ ಬೃಹತ್ ಪ್ರತಿಭಟನೆ.ಭ್ರಷ್ಟಚಾರ ಮುಚ್ಚಿಕೊಳ್ಳಲು ಹಿಂದುಳಿದ ನಾಯಕ ಎನ್ನುತ್ತಿದ್ದಾರೆ. ಹಿಂದುಳಿದ ವರ್ಗಗಳ ಸಿಎಂ ಎಂದು ಅವರೇ ಹೇಳಿಕೊಳ್ಳುತ್ತಿದ್ದಾರೆ . ಮುಡಾದಲ್ಲಿ ಬೃಹತ್ ಭ್ರಷ್ಟಾಚಾರ ಆದ್ರೂ ಏನು ಆಗಿಲ್ಲ ಅಂತಾರೆ.  ಹಿಂದುಳಿದ ವರ್ಗದ ನಾಯಕ ಎನ್ನಲು ಸಿಎಂ ಗೆ ನೈತಿಕ ಹಕ್ಕಿಲ. ಸಿಎಂ ಸಿದ್ದರಾಮಯ್ಯ ಮೊದಲು ರಾಜೀನಾಮೆ ಕೊಟ್ಟು ಕೆಳಗಿಳಿಯಲಿ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ  ಬಿಜೆಪಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಆರ್.‌ ರಘು ಕೌಟಿಲ್ಯ ಹೇಳಿಕೆ.

ಮುಡಾ ಸುತ್ತಲೂ ನಾಕಬಂದಿ: 

ಮುಡಾ 50:50 ಹಗರಣ ವಿಚಾರ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ಹಿನ್ನಲೆ ಮುಡಾ ಸುತ್ತಲೂ ನಾಕಬಂದಿ ರಚನೆ. ಮೈಸೂರಿನ ಮುಡಾ ಪ್ರವೇಶಿಸದಂತೆ ಪೊಲೀಸ್ ಬಿಗಿ ಬಂದೋಬಸ್ತ್  ಮೈಸೂರಿನ ಮಹಾರಾಜ ಕಾಲೇಜಿನ ಬಳಿ ಜಾಮವಣೆಗೊಂಡಿರುವ ಬಿಜೆಪಿ ಕಾರ್ಯಕರ್ತರು. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ  ಬಾವುಟ ಹಿಡಿದು ನಿಂತಿರುವ ಕಾರ್ಯಕರ್ತರು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಸಿಟಿ ರವಿ ಬರುವಿಕೆಗಾಗಿ ಕಾದು ನಿಂತಿರುವ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗುತ್ತಿರುವ ಕಾರ್ಯಕರ್ತರು.

key words:  Govt doesn’t have money, to close potholes, govt treasury is, completely empty, Yaduveer, BJP, MUDA, Protest, Mysore