ಅನುದಾನ ತರಲು ಯಡಿಯೂರಪ್ಪ ಅವರಿಂದಲೇ ಆಗಲಿಲ್ಲ. ಇನ್ನು ಬಸವರಾಜ ಬೊಮ್ಮಾಯಿಗೆ ಆಗುತ್ತಾ.? ಸಿದ್ಧರಾಮಯ್ಯ ಟೀಕೆ.

ಮೈಸೂರು,ಜುಲೈ,31,2021(www.justkannada.in): ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರಲು ಬಿಎಸ್ ಯಡಿಯೂರಪ್ಪನ ಕೈಯಲ್ಲೂ ಆಗಲಿಲ್ಲ. ಇನ್ನು ಬಸವರಾಜ ಬೊಮ್ಮಾಯಿಗೆ ಆಗುತ್ತಾ.? ಎಂದು  ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯಲ್ಲೇ ಬೆಳೆದ ಯಡಿಯೂರಪ್ಪಗೆ ಅನುದಾನ ತರಲು ಸಾಧ್ಯವಾಗಲಿಲ್ಲ. ಇನ್ನು ಜನತಾದಳದಿಂದ ಹೋದ ಬಸವರಾಜ ಬೊಮ್ಮಾಯಿಗೆ ಆಗುತ್ತಾ.? ಜನತಾದಳದಿಂದ ಹೋದವರ ಮಾತು ಕೇಳುತ್ತಾರಾ.? ಎಂದು ಪ್ರಶ್ನಿಸಿದರು. ಈ ಮೂಲಕ ಮತ್ತೆ ಜನತಾದಳದಿಂದ ಸಿಎಂ ಆದರು ಎಂದು ಉಲ್ಲೇಖಿಸಿದರು.

ಸಚಿವ ಸಂಪುಟ ಆಗಬೇಕಿತ್ತು ನೆನ್ನೆ ಚರ್ಚೆ ಮಾಡಿಲ್ಲ. ಮುಂದಿನ ಬಾರಿ ಆಗಬಹುದು. ಕೊರೊನಾ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಕೋವಿಡ್ 3ನೇ ಅಲೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಸರ್ಕಾರ ಕೊರೊನಾ 3ನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ರಾಜ್ಯ ಕೊರೊನಾ ಮೂರನೇ ಅಲೆಗೆ ಸಿಲುಕಲಿದೆ. ಸಚಿವರು ಇಲ್ಲದಿದ್ದರೂ ಅಧಿಕಾರಿಗಳ ಮೂಲಕ ನಿರ್ವಹಣೆ ಮಾಡಬೇಕು.ಸಚಿವರು ಇದ್ದರೆ ಅವರೇನು ಗಡಿಗೆ ಬೀಗ ಹಾಕಲು ಸಾಧ್ಯವಿಲ್ಲ. ಅಧಿಕಾರಿಗಳ ಮೂಲಕ ಈ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಸರ್ಕಾರದ ಏಕ ವ್ಯಕ್ತಿಯಿಂದ  ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಆದಷ್ಟು ಬೇಗವಸಚಿವ ಸಂಪುಟ ಆಗಬೇಕು. ಕೇರಳ, ಮಹಾರಾಷ್ಟ್ರದಿಂದ ಬರುವವರನ್ನು ತಡೆಯಬೇಕು. ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಕಳೆದ ಬಾರಿಯ ನೆರೆ ಪರಿಹಾರವೇ ಇನ್ನು ಸರ್ಕಾರ ನೀಡಿಲ್ಲ. ಮನೆ ಬಿದ್ದವರಿಗೆ 10 ಸಾವಿರ ಪರಿಹಾಸ ಸಹಾ ಬಂದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಕಿಡಿಕಾರಿದರು.

ENGLISH SUMMARY….

Can Basavaraj Bommai get grants sanction from the center when BSY couldn’t? Siddaraiamah
Mysuru, July 31, 2021 (www.justkannada.in): “When B.S. Yediyurappa couldn’t get grants to the State from the Center, how can Basavaraj Bommai bring?,” questioned Leader of the Opposition Siddaramaiah.
Speaking to the reporters in Mysuru today he said, “when B.S. Yediyurappa who is basically from BJP couldn’t bring any grants to the state from the center, how can Bommai who is actually from JDS, convince the BJP national leaders and bring grants? Will they listen to his words?” he questioned. He sarcastically mentioned that Bommai is a JDS CM!
In his reply to the formation of the cabinet, he said it should be finished as early as possible as the fear of COVID 3rd wave is making rounds.
“The government should consider the COVID-19 third wave problem seriously. Otherwise, the State will suffer a lot. Though there are no ministers he should get all the works done through the officials. Even if there is a cabinet and ministers they can’t lock the borders of the state,” he said.
Keywords: Opposition leader/ Siddaramaiah/ COVID-19/ Basavaraj Bommai/ grants/ Center/ B.S. Yediyurappa

Key words: Yeddyurappa- did not – grant –CM-Basavaraja Bommai-. Siddaramaiah-mysore