ಬೆಂಗಳೂರು,ಮಾ,6,2020(www.justkannada.in): ಖಾಸಗಿ ವಲಯದ ಯೆಸ್ ಬ್ಯಾಂಕ್ ಗೆ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು ಯೆಸ್ ಬ್ಯಾಂಕ್‌ನಿಂದ ಗ್ರಾಹಕರು ತಮ್ಮ ಠೇವಣಿಯನ್ನು ವಿತ್ ಡ್ರಾ ಮಾಡುವ ಮಿತಿಯನ್ನು 50 ಸಾವಿರ ರೂಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿ ಮಾಡಿದೆ.
ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು ಈ ಹಿನ್ನೆಲೆ ಯೆಸ್ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಿಂದ ಗರಿಷ್ಠ 50 ಸಾವಿರ ರೂ. ವರೆಗೆ ಮಾತ್ರ ಹಣ ಡ್ರಾ ಮಾಡಲು ಆರ್ ಬಿಐ ಮಿತಿ ವಿಧಿಸಿದೆ. ಹೀಗಾಗಿ ಠೇವಣಿದಾರರು ತಮ್ಮ ಹಣವನ್ನು ಡ್ರಾ ಮಾಡಲು ಮುಗಿಬಿದ್ದಿದ್ದಾರೆ.
ಇನ್ನು ಹಲವು ಕಡೆಗಳಲ್ಲಿ ಯೆಸ್ ಬ್ಯಾಂಕ್ ಎಟಿಎಂಗಳಲ್ಲಿ ಹಣ ಲಭ್ಯವಿಲ್ಲ. ಜತೆಗೆ ಅನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಹಾಗೆಯೇ ಫೋನ್ ಪೇ ನಲ್ಲಿ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಹೀಗಾಗಿ ಯೆಸ್ ಬ್ಯಾಂಕ್ ಗ್ರಾಹಕರು ಹಣ ಡ್ರಾ ಮಾಡಲು ತೀವ್ರ ಪರದಾಟ ನಡೆಸುತ್ತಿದ್ದಾರೆ.
ಚೆಕ್ ಮತ್ತು ವಿತ್ ಡ್ರಾ ಫಾರಂ ಮೂಲಕವೇ ಹಣ ಡ್ರಾ ಮಾಡಲು ಅವಕಾಶವಿದ್ದು ಹೀಗಾಗಿ ಗ್ರಾಹಕರು ಹಣ ಡ್ರಾ ಮಾಡಲು ಬ್ಯಾಂಕ್ ನಲ್ಲಿ ಮುಗಿಬಿದ್ದಿದ್ದಾರೆ.
Key words: Yes bank- financial crisis- Limit -Draw -Customer