ಮೈಸೂರು, ಡಿಸೆಂಬರ್ ೪, ೨೦೨೧ (www.justkannada.in): ವೈಐ ಮೈಸೂರು (Yi Mysuru) ರ್ಯಾಂ ಪ್ ಇಟ್ ಟಪ್, ಮೈಸೂರು,” ( “RAMP IT UP, MYSURU”) ಎಂಬ ಮುಂಚೂಣಿ ಉಪಕ್ರಮವೊಂದಕ್ಕೆ ಚಾಲನೆ ನೀಡುವ ಮೂಲಕ ‘ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನ’ ಆಚರಿಸಿತು.
ಈ ಉಪಕ್ರಮದಡಿ ಮೈಸೂರಿನಲ್ಲಿರುವ ಪ್ರಮುಖ ಕಟ್ಟಡಗಳನ್ನು ವಿಶೇಷಚೇತನರ ಸ್ನೇಹಿಯಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಕಾರ್ಯಕ್ರಮಕ್ಕೆ, ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವಂತಹ ‘ಕ್ಯಾಂಪಿಂಗ್ ರೌಂಡ್ ರೆಸಾರ್ಟ್,’ ‘ವೆನ್‌ಜೇ ಎಡಿಫೈಸ್ ಕಮರ್ಷಿಯಲ್ ಬಿಲ್ಡಿಂಗ್’ ಹಾಗೂ ‘ರೋಟರಿ ಮೈಸೂರು ಸೆಂಟರ್,’ ಈ ಮೂರು ಕಟ್ಟಡಗಳಲ್ಲಿ ಚಾಲನೆ ನೀಡಲಾಯಿತು.
‘ವೈಐ ಮೈಸೂರು’ ಇಡೀ ಮೈಸೂರು ನಗರದಲ್ಲಿ ಈ ಉಪಕ್ರಮವನ್ನು ಅಳವಡಿಸುವ ಆಶಯವನ್ನು ಹೊಂದಿರುವುದಷ್ಟೇ ಅಲ್ಲದೇ ಭಾರತದಾದ್ಯಂತ ಇರುವಂತಹ ತನ್ನ ೫೫ ಕೇಂದ್ರಗಳ ಮೂಲಕ ಇಂತಹ ಇತರೆ ಎಲ್ಲಾ ಸಾರ್ವಜನಿಕ ಕಟ್ಟಡಗಳನ್ನೂ ಸಹ ವಿಶೇಷಚೇನತರಿಗೆ ಅನುಕೂಲವಾಗುವ ರೀತಿಯಲ್ಲಿ ಮೂಲಭೂತಸೌಕರ್ಯಗಳನ್ನು ಹೊಂದಿರುವಂತೆ ಮಾಡುವ ಉದ್ದೇಶ ಹೊಂದಿದೆ.
‘ವೈಐ’ ಸದಸ್ಯರಾದ ಗಗನ್ ರಾಂಕಾ, ಸೌಮ್ಯ ಎಸ್.ಡಿ., ವೈಐ ನ್ಯಾಷನಲ್ ಆ್ಯಕ್ಸಿಸೆಬಲಿಟಿ ಚೇರ್ ರವಿಶಂಕರ್ ಡಿ., ವೈಐ ಮೈಸೂರು ಅಧ್ಯಾಯದ ಅಧ್ಯಕ್ಷ ನಿಖಿಲ್ ಪಿ. ಕೌಂಡಿನ್ಯ, ಡಾ. ವಿ. ಶೇಷಾದ್ರಿ (ವೆನ್‌ಜೇ ಎಡಿಫೈಸ್‌ನ ಮಾಲೀಕರು), ಶಿವ ಸ್ವರೂಪ್ ಅರಸ್ (ಕ್ಯಾಂಪಿಂಗ್ ರೌಂಡ್ ನ ಮಾಲೀಕರು), ರೋಟರಿ ಮೈಸೂರು ತಂಡ, ಹಾಗೂ ವೈಐನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
key words : Yi Mysuru -observed – International Day – for Persons with Disabilities
ENGLISH SUMMARY :
Yi Mysuru observed International Day for Persons with Disabilities by launching a flagship initiative called “RAMP IT UP, MYSURU”. This initiative aims at making buildings in Mysuru access friendly for the persons with disabilities. This was launched today at 3 frequently visited buildings by general public, namely – Camping round resort , Venjay Edifice commercial building & Rotary Mysore center .
Yi Mysuru hopes to adopt this initiative in the entire city of Mysuru and all 55 chapters across India and help equip buidlings with infrastructure making them access friendly.
The launch was attended by Yi members Gagan Ranka, Sowmya S D, Yi National Accessibility Chair Ravishankar D, Yi Mysuru Chapter Chair Nikhil P Koundinya, Dr. V Sheshadri (owner Venjay Edifice), Shiva Swaroop Urs (owner Campinground), Rotary Mysore team.