ಬೆಂಗಳೂರು,ಮಾರ್ಚ್,21,2021(www.justkannada.in) : ಯತ್ನಾಳ್ ಸಿಎಂ ಆಗುವ ಹಗಲು ಗನಸು ಕಾಣುತ್ತಿದ್ದಾರೆ. ಸಿಎಂ ಬಿಎಸ್ ವೈ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ನಿನಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಎಂ ಬದಲಾವಣೆ ನೂರಕ್ಕೆ, ನೂರರಷ್ಟು ಖಚಿತ ಎಂಬ ಹೇಳಿಕೆ ವಿರುದ್ಧ ಆಕ್ರೋಶವ್ಯಕ್ತಪಡಿಸಿದ ಅವರು, ಯತ್ನಾಳ್ ಒಬ್ಬ ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಯತ್ನಾಳ್ ನೀನು ಕೂಡ ಭ್ರಷ್ಟ. ವಿಜಯಪುರದಲ್ಲಿ ಮಗನ ಮೂಲಕ ಭ್ರಷ್ಟಾಚಾರ ಮಾಡಿಸುತ್ತಿರುವೆ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಗೆದ್ದು ಬಾ. ಆಗ ಸಿಎಂ ಆಗುವ ಬಗ್ಗೆ ಮಾತಾಡು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
key words : you-Aspirin-there-Cm-Change-Challenge-MLA-M.P.Renukaacharya-Yatnal