ಯುವತಿಯೊಂದಿಗೆ ಅನೈತಿಕ ಸಂಬಂಧ: ಯುವಕನ ಬರ್ಬರ ಹತ್ಯೆ

ಮೈಸೂರು,ಮಾರ್ಚ್,14,2025 (www.justkannada.in):  ಮದುವೆಯಾಗಿದ್ದರೂ ಬೇರೊಬ್ಬ ಯುವತಿಯ  ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ  ಬರ್ಬರವಾಗಿ ಕೊಲೆಯಾಗಿರುವ  ಘಟನೆ ಮೈಸೂರಿನಲ್ಲಿ ನಡೆದಿದೆ.

ಸೂರ್ಯ ಹತ್ಯೆಯಾದ ವ್ಯಕ್ತಿ. ಸೂರ್ಯ ಈಗಾಗಲೇ ಮದುವೆಯಾಗಿದ್ದು ಈ ಮಧ್ಯೆ ಇನ್ ಸ್ಟಾಗ್ರಾಂ ನಲ್ಲಿ ಶ್ವೇತಾ ಎಂಬ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ  ಇದರಿಂದ ಬೇಸತ್ತು ಪತ್ನಿ ಹಗೂ ತಾಯಿ ಮನೆ ಬಿಟ್ಟು ಹೋಗಿದ್ದರು.

ಈ ಮಧ್ಯೆ ಸೂರ್ಯ ಶ್ವೇತಾ ಜೊತೆಗಿದ್ದ ಫೋಟೋಗಳನ್ನು ಸ್ಟೇಟಸ್ ಗೆ ಹಾಕಿಕೊಂಡಿದ್ದ. ಕೆಲ ದಿನಗಳಿಂದ ಶ್ವೇತಾ ಹಣ ಹಾಗೂ ಆಸ್ತಿಗಾಗಿ ಪೀಡಿಸುತ್ತಿದ್ದಳು ಎನ್ನಲಾಗಿದೆ. ನಿನ್ನೆ ರಾತ್ರಿ ಶ್ವೇತಾ ಜೊತೆ ತೋಟದಲ್ಲಿದ್ದ ಸೂರ್ಯ ಇಂದು ಬೆಳಗಾಗುವಷ್ಟರಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದು,  ಶ್ವೇತಾಳೇ ಕೊಲೆ ಮಾಡಿರುವುದಾಗಿ  ಸೂರ್ಯ ಕುಟುಂಬಸ್ಥರು ಆರೋಪಿಸಿದ್ದಾರೆ.  ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore, young man, murder