ಮದುವೆಗೆ ಒಪ್ಪದ ಹಿನ್ನೆಲೆ: ಹುಡುಗಿ ಮನೆ ಮುಂದೆಯೇ ಯುವಕ ಆತ್ಮಹತ್ಯೆ

ತುಮಕೂರು,ಡಿಸೆಂಬರ್,7,2024 (www.justkannada.in):  ಪ್ರೀತಿಸಿದ ಹುಡುಗಿ ಮನೆಯವರು ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಹುಡುಗಿ ಮನೆ ಮುಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ  ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ಈ ಘಟನೆ  ನಡೆದಿದೆ. ಮಂಜುನಾಥ್(32) ಮೃತ ಯುವಕ . ಮೃತ ಮಂಜುನಾಥ್ ಟಿಟಿ ವಾಹನದ ಚಾಲಕನಾಗಿದ್ದು, ಕೆಲ ತಿಂಗಳಿಂದ  ಪಕ್ಕದ ಮನೆ ಹುಡುಗಿಯನ್ನ ಪ್ರೀತಿಸುತ್ತಿದ್ದನು. ಇಬ್ಬರು ಪರಸ್ಪರ ಮದುವೆಯಾಗಲು ಒಪ್ಪಿದ್ದರು.

ಈ ಮಧ್ಯೆ  ಮದುವೆ ಮಾಡಿಕೊಡುವಂತೆ ಯುವತಿ ಮನೆಯವರನ್ನ ಮಂಜುನಾಥ್ ಕೇಳಿದ್ದಾನೆ. ಆದರೆ ಮಂಜುನಾಥ್‌ಗೆ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಿಸಿದ್ದು ಈ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಹುಡುಗಿ ಮನೆ ಮುಂದೆಯೇ ಮಂಜುನಾಥ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Young man, commits suicide, girl, house