ಲಸಿಕೆ ಪಡೆಯುವುದಕ್ಕೂ ಮುನ್ನ ಯುವಕರು ರಕ್ತದಾನ ಮಾಡಲು ಮುಂದಾಗಿ- ರಕ್ತದಾನ ಮಾಡುವ ಮೂಲಕ ಡಾ. ಪುಷ್ಪ ಅಮರ್ ನಾಥ್ ಕರೆ…

ಮೈಸೂರು,ಏಪ್ರಿಲ್,30,2021(www.justkannada.in): ಯುವ ಸಮೂಹ ರಕ್ತದಾನ ಮಾಡಿದರೇ ಏಕಕಾಲಕ್ಕೆ ಮೂರು ಜೀವವನ್ನ ಉಳಿಸಬಹುದು. ಹೀಗಾಗಿ ಲಸಿಕೆ ಪಡೆಯುವುದಕ್ಕೂ ಮುನ್ನ ಯುವಕರು ಹೆಚ್ಚಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಡಾ. ಪುಷ್ಪ ಅಮರ್ ನಾಥ್ ಕರೆ ನೀಡಿದರು.

jk

ಕೊವಿಡ್- 19ರ 2ನೇ ಅಲೆಯಿಂದ ನಾಗರೀಕರು  ಆರೋಗ್ಯವಾಗಿರುವಂತೆ ರಕ್ಷಿಸಲು ಆರೋಗ್ಯ ಇಲಾಖೆಯಿಂದ ಯುವಸಮೂಹಕ್ಕೆ ಕೋವಿಡ್ ಶೀಲ್ಡ್ ಲಸಿಕೆ ನೀಡುತ್ತಿದೆ. ಈ ಮಧ್ಯೆ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ರಕ್ತದಾನ ಮಹಾದಾನ ವತಿಯಿಂದ ಹಮ್ಮಿಕೊಂಡಿದ್ದ  “ಯುವಕರೇ ಮೊದಲು ರಕ್ತನೀಡಿ ನಂತರ ಲಸಿಕೆ ಪಡೆಯಿರಿ”   ಕಾರ್ಯಕ್ರಮವನ್ನು ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಡಾ. ಪುಷ್ಪ ಅಮರ್ ನಾಥ್ ಅವರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. 80 ಮಂದಿ ಯುವಕ, ಯುವತಿಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೆಪಿಸಿಸಿ  ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ಕೋವಿಡ್ ತಡೆಗಟ್ಟಲು ರಾಜ್ಯ ಲಾಕ್ ಡೌನ್ ಆಗಿರುವ ಪರಿಣಾಮ ನಾಗರೀಕರಿಗೆ ಆರೋಗ್ಯ ಚಿಕಿತ್ಸೆ ಸಕಾಲಕ್ಕೆ ಸಿಗದೇ ಪರಿತಪಿಸುತ್ತಿದ್ದಾರೆ, ಹೆರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಅಪಘಾತಗಳು ಸಂಭವಿಸಿದಾಗ ತುರ್ತು ರಕ್ತ ಅವಶ್ಯಕವಿರುತ್ತದೆ, ರಕ್ತಶೇಖರಣೆ 30%ಗಿಂತ ಕುಸಿದಿದ್ದು, ಇದನ್ನ ಮನಗೊಂಡು ಯುವ ಸಮೂಹ ರಕ್ತದಾನ ಮಾಡಿದರೇ ಏಕಕಾಲಕ್ಕೆ ಮೂರು ಜೀವವನ್ನ ಉಳಿಸಬಹುದು, ಲಸಿಕೆ ಪಡೆಯುವುದಕ್ಕೂ ಮುನ್ನ ಯುವಕರು ಹೆಚ್ಚಾಗಿ ರಕ್ತದಾನ ಮಾಡಲು ಮುಂದಾಗಬೇಕು, ಇಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ರವರ ಮನವಿ ಮೇರೆಗೆ ನಾನು ಸಹ ರಕ್ತದಾನ ಮಾಡಿದ್ದೇನೆ, ಕೋವಿನ್ ಪೋರ್ಟಲ್ ನಲ್ಲಿ ಯುವಕರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು ಅದರಲ್ಲಿ ರಕ್ತದಾನ ಮಾಡಿದವರಿಗೆ ಲಸಿಕೆ ನೀಡಲು ಮೊದಲ ಆದ್ಯತೆ ಕೊಡುವುದಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.Young people -donate -blood –before- getting-vaccine-kpcc-women unit –president-Pushpa Amarnath.

ಇದೇ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಉದ್ದಿಮೆ ಅಪೂರ್ವ ಸುರೇಶ್ ,ಸ್ಯಾಮ್ಯುಯೆಲ್ ವಿಲ್ಸನ್ ,ಡಾ.ಮಮತಾ ,ಡಾ.ರಾಧಾ, ತೇರಾಪಂತ್ ಯುವಕರ ಬಳಗದ ಅಧ್ಯಕ್ಷರಾದ ದಿನೇಶ್ ದಕ್ , ಸಿಜಲ್ ಕೊಠಾರಿ, ದೇವೇಂದರ್, ಆನಂದ್ , ಹಾಗೂ ಇನ್ನಿತರರು ಹಾಜರಿದ್ದರು.

Key words: Young people -donate -blood –before- getting-vaccine-kpcc-women unit –president-Pushpa Amarnath.