ಮೈಸೂರು,ಅಕ್ಟೋಬರ್,8,2024 (www.justkannada.in): ಜಿದ್ದಿ ಜಿದ್ಧಿ ಹೆ ತೂಫಾನ್ ಎಂದು ವೇದಿಕೆಗೆ ಆಗಮಿಸಿದ ಖ್ಯಾತ ಕನ್ನಡ ಸಂಗೀತ ಸಂಯೋಜಕರಾದ ರವಿ ಬಸ್ರೂರು ಅವರು ಕರುನಾಡ ಜನತೆಯ ಮನಮುಟ್ಟುವಂತೆ ಎದೆ ಝಲ್ ಎನಿಸುವಂತೆ ಮಾಡಿ ಉಗ್ರಂ ಚಿತ್ರದ ಉಗ್ರಾಂ ವಿರಾಮ್ ಗೀತೆಯನ್ನು ಹಾಡುತ ನೋಡುಗರ ಮೈ ಜುಮ್ ಎನಿಸುವಂತೆ ಮಾಡಿದರು.
ನನ್ನ ಜೀವನದ ಮ್ಯೂಸಿಕ್ ಜರ್ನಿ ಆರಂಭವಾಗಿದ್ದು ಮೈಸೂರಿನಿಂದಲೇ ಭಕ್ತಿಗೀತೆ ಮೂಲಕ ಆರಂಭಿಸಿದ ಜರ್ನಿ ಇಂದು ಉತ್ತಮ ಮಟ್ಟದ ಸ್ಥಾನಕ್ಕೆ ತಂದು ನಿಲ್ಲಿಸಿವೆ ಎಂದರು. ಉಗ್ರಂ ಚಿತ್ರದ ಮೂಲಕ ಗುರುತಿಸಿ ಹೆಚ್ಚಿನ ಅವಕಾಶವನ್ನು ಕಲ್ಪಿಸಿ ದೊಡ್ಡ ಮಟ್ಟದ ಸಾಧನೆಯನ್ನು ತಂದಿದೆ ಎಂದು ಮೈಸೂರು ಜನತೆಗೆ ದಸರಾ ಶುಭಾಶಯವನ್ನು ಕೋರಿದರು.
ನಂತರದಲ್ಲಿ ರವಿ ಬಸ್ರೂರು ಅವರು ಸಂಯೋಜಿಸಿರುವ ವಿವಿಧ ಚಿತ್ರದ ಗೀತೆಗಳನ್ನು ಆರಂಭಿಸಿ ಮೈಸೂರಿನ ಯುವ ಜನತೆಯ ಮನ ಸೆಳೆಯುವುದರ ಜೊತೆಗೆ ಕುಣಿದು ಕುಪ್ಪಳಿಸುವಂತೆ ಮಾಡಿದರು.
ರೋಜ್ ಚಿತ್ರದ ನಾಯಕಿ ಸಾಧ್ವೀಕ ಅವರು ಡಿಸ್ಕೋ ಆಡಲಕ ಗಲ್ಲು ಗಲ್ಲು ಗೆಜ್ಜೆ ಕಟ್ಟಿನಿ, ಶೇಕ್ ಹಿಟ್ ಪುಷ್ಪಾವತಿ, ಬೇಬಿ ಡ್ಯಾನ್ಸ್ ಫ್ಲೋರ್ ರೆಡ್ಡಿ ಎಂಬ ದರ್ಶನ್ ಅವರ ಚಿತ್ರದ ಗೀತೆಗಳಿಗೆ ಹೆಜ್ಜೆ ಹಾಕಿ ಕುಣ್ಣಿದು ಕುಪ್ಪಳಿಸಿ ಮೈಸೂರು ಯುವ ಸಮೂಹಕ್ಕೆ ಕೀಚಿಬಿಸಿದ್ದರು.
ಕನ್ನಡ ನಾಡಿನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ಅಂಜನಿ ಪುತ್ರ ಚಿತ್ರದ ಗೀತೆಯನ್ನು ಹಾಡುವ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಸಿಕೊಂಡರು.
ರವಿ ಬಸ್ರೂರು ತಂಡದ ಗಾಯಕ ಗಾಯಕಿಯರಿಂದ ಸ್ಯಾಂಡಲ್ ವುಡ್ ನೈಟ್ಸ್ ಕಾರ್ಯಕ್ರಮಕ್ಕೆ ಕಿಚ್ಚು ಹಚ್ಚುವಂತೆ ಗಾಯಕಿ ವಿಜಯಲಕ್ಷ್ಮಿ ಅವರು ನಮಾಮಿ ನಮಾಮಿ ಈಶ್ವರ ಪದ ಪೂಜೀತಂ ಎಂಬ ಗೀತೆಯ ಮೂಲಕ ನೆರೆದಿದ್ದ ಯುವ ಸಮೂಹದ ಮೈ ರೋಮಾಂಚನಗೊಳಿಸಿದರು. ಗಾಯಕ ಸಂತೋಷ್ ವೆಂಕಿ ದ್ವಾಪರದಲ್ಲಿ ಶ್ರೀ ಕೃಷ್ಣ ಗೀತೆಯೂ ಯುವ ಮನಸನ್ನು ಮುಟ್ಟಿತು. ಕನ್ನಡ ಕೋಗಿಲೆ ಖ್ಯಾತಿಯ ದಿವ್ಯ ರಾಮಚಂದ್ರ ಅವರು ಕನ್ನಡ ನಾನು ಕೋಳಿಗೆ ರಂಗ ಎಂಬ ರ್ಯಫ್ ಗೀತೆಗೆ ಮೈದಾನದಲ್ಲಿ ನೆರೆದಿದ್ದ ಯುವ ಸಮೂಹ ಹುಚ್ಛೆದು ಕುಣಿದು ಕುಪ್ಪಳಿಸಿದರು.
ತಂಡದ ಸಂತೋಷ್ ವೆಂಕಿ ಹಾಗೂ ಸಂಗಡಿಗರು ಮೈಸೂರು ದಸರಾ ಗೀತೆಯನ್ನು ವಿಭಿನ್ನ ಶೈಲಿಯಲ್ಲಿ ಹಾಡಿ ಮನ ಸೆಳೆದ್ದರು.
ತೇರು ಮೇರಿ ಕಹನಿ ಎಂದು ಕಾರ್ಯಕ್ರಮವನ್ನು ಆರಂಭಿಸಿದ ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕಿ ಧ್ವನಿ ಭಾನುಶಾಲಿ ಅವರ ಧ್ವನಿಯು ಯುವ ಮನಸ್ಸುಗಳನ್ನು ಸೆಳೆಯುವಲ್ಲಿ ಯಶಸ್ವಿ ಕಂಡಿತ್ತು, ಕಾರ್ಯಕ್ರಮದ ಆರಂಭದ ಸಂದರ್ಭದಲ್ಲಿ ತುಂತುರು ಮಳೆ ಕಾಣಿಸಿಕೊಂಡರು ‘ಹಿಷರೆ ಮೆರೆ ಕಾಮರೆಮೆ ‘ ಗೀತೆಯ ಮೂಲಕ ಯುವ ಮನಸುಗಳನ್ನು ಮೈದಾನದಲ್ಲೇ ಕುಣಿದು ಕುಪ್ಪಳಿಸುವಂತೆ ಮಾಡಿತ್ತು. ದಿಲ್ಬರ್ ದಿಲ್ಬರ್, ಪುಷ್ಪ ಚಿತ್ರದ ಹಿಂದಿ ವರ್ಷನ್ ಹು ಅಂಟವಾ ಮಾವ ಗೀತೆಗೆ ತಮ್ಮ ತಂಡದ ಜೊತೆಗೆ ಹೆಜ್ಜೆ ಹಾಕಿ ನೋಡುಗರ ಕಣ್ಮನ ಸೆಳೆಯುತ ಶಿಲ್ಲೆ.ಚಪ್ಪಾಳೆಯ ಜಾತ್ರೆಯನ್ನೇ ಹೆಚ್ಚಿಸಿದರು. ಕೋಕಾ ಎಂಬ ಹಿಂದಿ ಗೀತೆಯನ್ನು ಹಾಡುತ್ತಾ ಯುವ ಮನಸ್ಸುಗಳನ್ನು ಸೆಳೆಯುವುದರ ಜೊತೆಗೆ ಕುಣಿದು ಕುಪ್ಪಳಿಸಿ ಎಲ್ಲರನ್ನೂ ರಂಜಿಸಿ ಎಲ್ಲರಿಗೂ ದಸರಾ ಹಬ್ಬದ ಶುಭ ಕೋರಿದರು.
ಒಟ್ಟಾರೆಯಾಗಿ ಬಾಲಿವುಡ್ ಗಾಯಕಿ ಕಂಠ ಸೀರಿಗೆ ಮೈಸೂರು ಯುವ ಮನಸುಗಳು ಮನಸೊತು ಕುಣಿದು ಕುಪ್ಪಳಿಸಿ ಯುವ ದಸರಾವನ್ನು ಯಶಸ್ವಿಗೊಳಿಸಿದರು.
ಮೈಸೂರು ಜಿಲ್ಲಾ ಡ್ಯಾನ್ಸ್ ಕೊರಿಯೋಗ್ರಾಫರ್ ಅಸೋಸಿಯೇಷನ್ ತಂಡವು ಯುವ ದಸರಾ ಕಾರ್ಯಕ್ರಮಕ್ಕೆ ಮೆರಗು ತರುವಂತೆ ಕನ್ನಡ ಚಲನಚಿತ್ರದ ಪ್ರಮುಖ ನಾಯಕರಾದ ದರ್ಶನ, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯಶ್ ಹೀಗೆ ವಿವಿಧ ಕಲಾವಿದರ ಚಿತ್ರಗೀತೆಗಳಿಗೆ ವಿವಿಧ ಭಂಗಿಯ ನೃತ್ಯವನ್ನು ವೇದಿಕೆಯಲ್ಲಿ ಪ್ರದರ್ಶಿಸಿ ಜನರ ಕಣ್ಮನ ಸೆಳೆದರು.
ಎರಡನೇ ದಿನದ ಯುವ ದಸರಾ ಕಾರ್ಯಕ್ರಮ ಆರಂಭಕ್ಕೂ ಮುನ್ನ ಯುವ ಸಂಭ್ರಮ ವೇದಿಕೆಯಲ್ಲಿ ಅವಕಾಶ ಸಿಗದ ವಿವಿಧ ಕಲಾತಂಡಗಳಿಂದ ಕಾರ್ಯಕ್ರಮವನ್ನು ಆಯೋಜಿಸಲಾಗತ್ತು . ಕೆ ಆರ್ ನಗರ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರಿಂದ ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರದ, ನ್ಯಾಯ, ಆಡಳಿತದ ಕುರಿತು ನೃತ್ಯದ ಮೂಲಕ ಸಾಮಾಜಿಕ ಸಂದೇಶವನ್ನು ಸಾರಿದರು.
ಮಡಿಕೇರಿಯ ಪ್ರಥಮ ದರ್ಜೆ ಕಾಲೇಜಿನ ಕಲಾ ತಂಡವು ತುಳು ನಾಡಿನ ವಿಶೇಷ ಯಕ್ಷಗಾನ ನೃತ್ಯ, ಕೊಡಗಿನ ಡ್ಯಾನ್ಸ್, ಕಾಡಿನ ಹಾಡಿಯ ಜನರ ಕಲಾಪ್ರಕಾರ, ಹಾಗೂ ಕೊಡವ ವಿಶೇಷ ನೃತ್ಯದ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಒಂಟಿ ಕೊಪ್ಪಲು ವಿದ್ಯಾರ್ಥಿಗಳು ನಮ್ಮ ಮೈಸೂರು ಚಾಮರಾಜನಗರ ವಿಭಾಗದ ಪ್ರಮುಖ ಕಲೆಯಾದ ಜನಪದ ಕಲೆ ಡೊಳ್ಳು ಕುಣಿತ, ತಮಟೆ ವಾದ್ಯವನ್ನು ಭಾರಿಸುತ್ತಾ ಕರಗ, ಪೂಜಾ ಕುಣಿತ, ವೀರಗಾಸೆ ಮುಂತಾದ ಜನಪದ ಕಲೆಯನ್ನು ಪ್ರದರ್ಶಿಸಿದರು.
ಮಂಡ್ಯದ ಪಿ.ಈ.ಎಸ್ ಕಾಲೇಜಿನ ವಿದ್ಯಾರ್ಥಿಗಳು ಮಲ್ಲಗಂಬ ಕ್ರೀಡೆಯನ್ನು ಪ್ರದರ್ಶಿಸಿ ನೋಡುಗರ ಮೈ ಜಮ್ ಎನುವಂತೆ ಮಾಡಿದರು. ಮೈಸೂರಿನ ಟೆರಿಷಿಯನ್ ಕಾಲೇಜು ವಿದ್ಯಾರ್ಥಿನಿಯರ ತಂಡವು. ದೇವರ ನಾಡು ಕೇರಳದ ಪ್ರಸಿದ್ದ ನೃತ್ಯವಾದ ಮೋಹಿನಿಯಟಂ ಪ್ರದರ್ಶನವನ್ನು ನೀಡಿದರು.
ಕರುಣಾಮಯಿ ಫೌಂಡೇಶನ್ ನ ವಿಶೇಷ ಮಕ್ಕಳ ಕಲಾತಂಡವು ಕರುನಾಡಿನ ವಿಶೇಷತೆಯ ಬಗ್ಗೆ ನೃತ್ಯವನ್ನು ಮಾಡಿ ತಮ್ಮ ಮುಗ್ಧ ನಡಿಗೆಯ ಮೂಲಕ ಮನ ಮನಸೆಳೆದರು.
ವಾಣಿವಿಲಾಸ ಅರಸು ಬಾಲಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೈಸೂರು ಕಂಡತಹ ಶ್ರೇಷ್ಠ ಆಡಳಿತಗಾರ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆ, ಆಡಳಿತವನ್ನು ತಮ್ಮ ನೃತ್ಯದ ಮೂಲಕ ತಿಳಿಸುವಲ್ಲಿ ಸಫಲರಾದರು.
ಮೈಸೂರು ವಿಶ್ವಿದ್ಯಾನಿಲಯದ ಕುವೆಂಪು ಕನ್ನಡ ಸಂಸ್ಥೆಯ ವಿದ್ಯಾರ್ಥಿಗಳು ಜನಪದ ಸೊಗಡಿನ ನೃತ್ಯದ ಮೂಲಕ ರಂಜಿಸಿದರು.
ಕಿಕ್ಕಿರಿದು ಸೇರಿದ್ದ ಯುವ ಸಮೂಹ :- ಕಾರ್ಯಕ್ರಮದ ಮೊದಲ ದಿನ ಸೇರಿದಂತೆಯೇ ಯುವ ದಸರಾ ಕಾರ್ಯಕ್ರಮದ ಎರಡನೇ ದಿನವೂ ಯುವ ಸಮೂಹವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿತ್ತು ಕನ್ನಡ ಹಿಂದಿ ಹೀಗೆ ವಿವಿಧ ಗೀತೆಗಳಿಗೆ ಕುಣಿದು ಕುಪ್ಪಳಿಸಿ ಯುವ ದಸರಾದ ಸವಿಯನ್ನು ಸವಿದು ಕಣ್ತುಂಬಿಕೊಂಡರು.
Key words: Yuva Dasara, Music, Ravi Basrur, youth, crowd