‘ಯುವರತ್ನ ‘ ಚಿತ್ರತಂಡದ ಬೌನ್ಸರ್ ನಿಂದ ಹಲ್ಲೆ ; ರೊಚ್ಚಿಗೆದ್ದ ಮಹಾರಾಜ ಕಾಲೇಜು ವಿದ್ಯಾರ್ಥಿಗಳು ಏನ್ ಮಾಡಿದ್ರು ಗೊತ್ತ..

 

ಮೈಸೂರು, ಸೆ.09, 2019 : (www.justkannada.in news) ಪವರ್ ಸ್ಟಾರ್ ಪುನಿತ್ ಅಭಿನಯದ ‘ಯುವರತ್ನ’ ಶೂಟಿಂಗ್ ವೇಳೆ ವಿದ್ಯಾರ್ಥಿಗೆ ಬೌನ್ಸರ್ ಹಲ್ಲೆ ನಡೆಸಿದ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ನಗರದ ಮಹಾರಾಜ ಕಾಲೇಜಿನ ಆವರಣದಲ್ಲಿ ಕಳೆದ ಕೆಲ ದಿನಗಳಿಂದ ಪುನೀತ್ ಅಭಿನಯದ ‘ಯುವರತ್ನ ‘ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸೋಮವಾರ ಬೆಳಗ್ಗೆ ಚಿತ್ರೀಕರಣದಲ್ಲಿ ಪುನೀತ್ ಭಾಗವಹಿಸಿದ್ದರು. ಈ ವೇಳೆ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶಿಸಿ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು. ಈ ವೇಳೆ ಚಿತ್ರತಂಡದ ಬೌನ್ಸರ್ ಗಳು ವಿದ್ಯಾರ್ಥಿಗಳನ್ನು ತಡೆಯಲು ಯತ್ನಿಸಿದರು. ಆಗ ತಳ್ಳಾಟ, ನೂಕಾಟ ನಡೆದಿದ್ದು ಈ ವೇಳೆ ಬೌನ್ಸರ್ ಒಬ್ಬ ವಿದ್ಯಾರ್ಥಿಯನ್ನು ಥಳಿಸಿದ ಎಂದು ಆರೋಪಿಲಾಗಿದೆ.
ಈ ಘಟನೆ ಬಳಿಕ ರೊಚ್ಚಿಗೆದ್ದ ವಿದ್ಯಾರ್ಥಿಗಳು ಚಿತ್ರತಂಡದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆಗೆ ಮುಂದಾದರು. ಕೂಡಲೇ ಸ್ಥಳಕ್ಕಾಗಮಿಸಿದ ಕಾಲೇಜು ಪ್ರಾಂಶುಪಾಲರು, ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು.

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಬೌನ್ಸರ್ ವಿರುದ್ಧ ಕ್ರಮ ಜರುಗಿಸುವಂತೆ ಕಾಲೇಜು ವಿದ್ಯಾರ್ಥಿಗಳು ರೊಚ್ಚಿಗೆದ್ದರು. ಕೂಡಲೇ ಆ ಬೌನ್ಸರ್ ಅನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿ ಕ್ಷಮಾಪಣೆ ಕೇಳಿಸಿದ ಬಳಿಕ ವಿದ್ಯಾರ್ಥಿಗಳು ಶಾಂತರಾದರು.

ಚಿತ್ರತಂಡ ಸ್ಪಷ್ಟನೆ;
‘ ರಾಜರತ್ನ’ ಚಿತ್ರೀಕರಣಕ್ಕೆ ವಿಶ್ವವಿದ್ಯಾನಿಲಯದಿಂದ ಅನುಮತಿ ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಹೊಂದುವಂತೆ ಶನಿವಾರ, ಭಾನುವಾರ ಹಾಗೂ ಮಂಗಳವಾರ ರಜೆಯಾದ್ದರಿಂದ ಅನುಮತಿ ನೀಡಿದ್ದರು. ಆದರೆ ಇಂದು ಚಿತ್ರೀಕರಣಕ್ಕೆ ಪೂರಕವಾಗಿ ಪೂರ್ವ ಸಿದ್ಧತೆ ನಡೆಸಿಕೊಳ್ಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಾಳೆ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಚಿತ್ರತಂಡದ ಮೂಲಗಳು ಸ್ಪಷ್ಟನೆ ನೀಡಿದೆ.

key words : yuvaraja-puneeth-rajkumar-mysore-maharajau-college-student-bouncer-assult