ಬೆಂಗಳೂರು,ಜೂ,12,2019(www.justkannada.in): ಹೂಡಿಕೆದಾರರಿಗೆ ಐಎಂಎ ಮಾಲೀಕ ಮನ್ಸೂರ್ ಖಾನ್ ವಂಚನೆ ಪ್ರಕರಣ ಸಂಬಂಧ ನಾನು ಮನ್ಸೂರ್ ನಿಂದ ಸಾಲ ಪಡೆದಿರುವುದು ಸಾಭೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಚಿವ ಜಮೀರ್ ಖಾನ್ ಸವಾಲು ಹಾಕಿದ್ದಾರೆ.
ಐಎಂಎ ವಂಚನೆ ಪ್ರಕರಣ , ಮನ್ಸೂರ್ ಖಾನ್ ಜೊತೆ ವ್ಯವಹಾರ ಸಂಬಂಧ ಕುರಿತು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಸಚಿವ ಜಮೀರ್ ಅಹಮದ್,ಇಲ್ಲಿ ಯಾರೂ ಹರಿಶ್ಚಂದ್ರರು ಇಲ್ಲ. ತಪ್ಪು ಮಾಡೋರು ಒಪ್ಕೊಬೇಕು. ತಪ್ಪುಮಾಡಿದ್ರೆ ಒಪ್ಕೋಬೇಕು. ಆದ್ರೆ ನನ್ನ ವಿಚಾರದಲ್ಲಿ ಸುಳ್ಳು ಮಾಹಿತಿ ಪ್ರಸಾರ ಆಗ್ತಿದೆ. ನಾನು ರಿಚ್ಮಂಡ್ ಟೌನ್ ನಲ್ಲಿ ನನ್ನ ಆಸ್ತಿಯನ್ನು ಮನ್ಸೂರ್ ಗೆ ಮಾರಾಟ ಮಾಡಿದ್ದೀನಿ. ಈ ಕುರಿತು ಸೇಲ್ ಡೀಡ್ ಇದೆ. ನಾನು ಮನ್ಸೂರ್ ನಿಂದ ಸಾಲ ತಗೊಂಡಿಲ್ಲ. ನನ್ನ ಆಸ್ತಿಯನ್ನೇ ಮಾರಾ ಮಾಡಿದ್ದಿನಿ.: 9 ಕೋಟಿ 38 ಲಕ್ಷಕ್ಕೆ ಆಸ್ತಿ ಮಾರಿದ್ದೇನೆ. 5 ಕೋಟಿ ರೂ ಅಡ್ವಾನ್ಸ್ ಕೊಟ್ಟಿದ್ದೀನಿ. ಎಲ್ಲವೂ ಪಾರದರ್ಶಕ ವ್ಯವಹಾರ ಮಾಡಿದೀನಿ. ನನ್ನ ಹೆಸರಿನಲ್ಲಿದ್ದ ನಿವೇಶನ ಮಾರಿದ್ದೇನೆ.5 ಕೋಟಿ ರೂ ಆರ್ಟಿಜಿಎಸ್ ಮೂಲಕ ಅವ್ರು ನನಗೆ ಪಾವತಿಸಿದ್ದಾರೆ.ಐಎಂಎ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಮಾಧ್ಯಮಗಳಲ್ಲೂ ಮನ್ಸೂರ್ ಕೋಟಿ ಕೋಟಿ ರೂ ಜಾಹಿರಾತು ಕೊಟ್ಡಿದ್ದಾನೆ. ಹಾಗಿದ್ರೆ ಮಾಧ್ಯಮಗಳಿಗೂ ಮನ್ಸೂರ್ ಗೂ ಸಂಬಂಧ ಇದೆ ಅಂತ ಅರ್ಥಾನಾ? ಎಂದು ಪ್ರಶ್ನಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೆಯೇ ನನಗೂ ಮನ್ಸೂರ್ ಮೇಲೆ ಅನುಮಾನ ಇರಲಿಲ್ಲ. ಹಾಗಾಗಿ ಅವನೊಂದಿಗೆ ವ್ಯವಹಾರ ಇಟ್ಕೊಂಡಿದ್ದೆ. ನನಗೂ ಇತ್ತೀಚೆಗೆ ರಮ್ಜಾನ್ ವೇಳೆ ಮನ್ಸೂರ್ ಬಗ್ಗೆ ಗೊತ್ತಾಯ್ತು ಎಂದರು.
ಪ್ರಕರಣದ ತನಿಖೆ ಮೊದಲು ಎಸ್ ಐಟಿ ಮಾಡಲಿ. ಇದರ ತನಿಖೆ ಸರಿಯಾಗಿ ಆಗಲಿಲ್ಲ ಅಂದ್ರೆ ಸಿಬಿಐಗೆ ಕೊಡಲಿ. ನನಗೆ ಬಂದ ಮಾಹಿತಿ ಪ್ರಕಾರ ಮನ್ಸೂರ್ ಗೆ ಸಾಕಷ್ಟು ಬೇನಾಮಿ ಆಸ್ತಿ ಇದೆ. ಸಿಬಿಐ ಬಗ್ಗೆ ಸಿಎಂ ತೀರ್ಮಾನಿಸ್ತಾರೆ. ಸದ್ಯಕ್ಕೆ ನಮ್ಮ ಪೊಲೀಸರು ತನಿಖೆ ಮಾಡಲಿ ಎಂದು ಜಮೀರ್ ಹೇಳಿದರು.
ಮನ್ಸೂರ್ ಆಡಿಯೋದಲ್ಲಿ ರೋಷನ್ ಬೇಗ್ ಹೆಸರು ಪ್ರಸ್ತಾಪ ವಿಚಾರ, ರೋಷನ್ ಬೇಗ್ ನಮ್ಮ ಪಕ್ಷದ ನಾಯಕ. ಅವರ ಹೆಸರು ಕೇಳಿ ಬಂದಿರುವ ಬಗ್ಗೆ ಮೊದಲು ತನಿಖೆ ಆಗಲಿ. ಅದು ಫೇಕ್ ಆಡಿಯೋ ಇರಬಹುದು. ತನಿಖೆ ಬಳಿಕ ರೋಷನ್ ಬೇಗ್ ಸಂಪರ್ಕ ಬಗ್ಗೆ ಗೊತ್ತಾಗುತ್ತೆ ಎಂದರು.
ನನಗೆ ವಂಚನೆ ಬಗ್ಗೆ ವಾಟ್ಸಪ್ ಮೂಲಕ ಮೆಸೇಜ್ ಗಳು ಬರುತ್ತಿದ್ದವು. ಹಾಗಾಗಿ ನಾನು ಕಳೆದ ಮೇ 26 ರಂದು ಮನ್ಸೂರ್ ಖಾನ್ ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಹೂಡಿಕೆ ಹಣ ವಂಚನೆ ಬಗ್ಗೆ ಚರ್ಚೆ ನಡೆಸಿದ್ದೆ. ಹಾಗೆಲ್ಲ ಏನೂ ಇಲ್ಲ. ನನ್ ಬಳಿ ಸಾಕಷ್ಟು ಆಸ್ತಿ ಇದೆ ಅಂದ್ರು. ನನಗೆ ಅವ್ರು ಹೀಗೆ ಓಡಿ ಹೋಗ್ತಾರೆ ಅಂತ ಗೊತ್ತಾಗ್ಲಿಲ್ಲ. ಅದೇ ದಿನ ಅಲೋಕ್ ಕುಮಾರ್ ಸಹ ಮನ್ಸೂರ್ ಖಾನ್ ಕರೆಸಿ ಚರ್ಚೆ ನಡೆಸಿದ್ರು. ಅವರಿಗೂ ಅನುಮಾನ ಬರಲಿಲ್ಲ ಎಂದು ಜಮೀರ್ ತಿಳಿಸಿದರು.
Key words: Zamir Khan- challenged – loan – Mansoor Khan- Political retirement