ಸಿಎಂ ಸಿದ್ದರಾಮಯ್ಯ ಅವರಿಂದ ಏ. ೨೬ ರಂದು ಉದ್ಘಾಟನೆಗೆ ಸಜ್ಜಾಗಿರುವ ವಲಯ ಕಚೇರಿ- 3 ರ ವಿಶೇಷತೆ ಏನು ಗೊತ್ತ.?

The zonal office-3 is set to be inaugurated by Chief Minister Siddaramaiah on April 26. A new well-equipped building has been prepared to serve the public better. About one-and-a-half acres of land, The building has been constructed at a cost of Rs 6.5 crore. Zonal Commissioner Sathyamurthy told.

ಮೈಸೂರು, ಏ.೨೩.೨೦೨೫:  ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಂದ ಏ. ೨೬ ರಂದು ವಲಯ ಕಚೇರಿ ಉದ್ಘಾಟನೆಗೆ ಸಜ್ಜಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಸಲುವಾಗಿ ಒಂದು ನೂತನ ಸುಸಜ್ಜಿತ ಕಟ್ಟಡ ಸಿದ್ದಗೊಂಡಿದೆ. ಸುಮಾರು ಒಂದುವರೆ ಎಕರೆ ಜಾಗದಲ್ಲಿ 6.5 ಕೋಟಿ ರೂ. ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ

ಸುದ್ದಿ ಗೋಷ್ಠಿ ಮೂಲಕ ಮಾಹಿತಿ ನೀಡಿದ ನಗರ ಪಾಲಿಕೆ ಅಧಿಕಾರಿ ವರ್ಗ ಹೇಳಿದಿಷ್ಟು..

ಈ ಹಿಂದೆ ಮೈಸೂರು ನಗರ ಪಾಲಿಕೆ ಆಯುಕ್ತರಾಗಿದ್ದ ಲಕ್ಷ್ಮಿಕಾಂತ ರೆಡ್ಡಿ ಅವರು 4 ಕೋಟಿ ಅನುದಾನ‌ ಕೊಟ್ಟಿದ್ದರು. ನಿಗದಿತ ಸಮಯದಲ್ಲಿ ಕಟ್ಟಡ ನಿರ್ಮಾಣ ಮಾಡಿ ಈಗ ಉದ್ಘಾಟನೆಗೆ ಸಿದ್ದವಾಗಿದೆ.

ಇದೇ ಶನಿವಾರ ಸಿಎಂ ಸಿದ್ದರಾಮಯ್ಯ ಈ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸುವರು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಎಲ್ಲಾ ರೀತಿಯ ವ್ಯವಸ್ಥೆ ಇರುವ ಒಂದು ಸುಸಜ್ಜಿತ ಕಟ್ಟಡ ಸಾರ್ವಜನಿಕರ ಸೇವೆಗೆ ಸಿದ್ದಗೊಂಡಿದೆ.

ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ಬರುವ 9 ವಲಯ ಕಚೇರಿಗಳು ಸ್ವಂತ ಕಟ್ಟಡಗಳ ಮೂಲಕ ಸೇವೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ವಲಯ ಕಚೇರಿಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈಗ ವಲಯ 1,2 ಮತ್ತು3 ಕಚೇರಿಗಳು ಸಾರ್ವಜನಿಕ ಸೇವೆ ಆರಂಭಿಸಿದ್ದು ಮುಂದೆ ಉಳಿದ ಎಲ್ಲಾ ವಲಯ ಕಚೇರಿಗಳನ್ನೂ ಕೂಡ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪಾಲಿಕೆ ಮುಂದಾಗಿದೆ. ಸುದ್ದಿ ಗೋಷ್ಠಿ ಮೂಲಕ ಪಾಲಿಕೆ ವಲಯ ಕಚೇರಿ ಅಧಿಕಾರಿಗಳಿಂದ ಮಾಹಿತಿ.

ಸುದ್ದಿ ಗೋಷ್ಠಿಯಲ್ಲಿ ನಗರ ಪಾಲಿಕೆ ಆಡಳಿತ ವಿಭಾಗದ ಆಯುಕ್ತ ದಾಸೇಗೌಡ, ಅಭಿವೃದ್ಧಿ ವಿಭಾಗದ ಆಯುಕ್ತೆ ಸಿಂಧು, ಮಹಾ  ಪಾಲಿಕೆ ಉಪ ಆಯುಕ್ತ ಸೋಮಶೇಖರ್ ಹಾಗೂ ವಲಯ ೩ ರ ಆಯುಕ್ತರಾದ ಸತ್ಯಮೂರ್ತಿ ಉಪಸ್ಥಿತರಿದ್ದರು.

ಕಟ್ಟಡದ ವಿಶೇಷತೆ:

ನೂತನವಾಗಿ ನಿರ್ಮಿಸಿರುವ ವಲಯ ಕಚೇರಿ-3 ರ ಕಟ್ಟಡದ  ವೈಶಿಷ್ಟತೆಯನ್ನು ಆಯುಕ್ತ ಸತ್ಯಮೂರ್ತಿ ಅವರು ವಿವರಿಸಿದ್ದು ಹೀಗೆ..

ಕಟ್ಟಡ ನಿರ್ಮಾಣವು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಸುಂದರ ವಿನ್ಯಾಸ ಹೊಂದಿದ್ದು,  ಕಟ್ಟಡದ ಸುತ್ತಲ್ಲೂ ಅತ್ಯಾರ್ಷಕವಾದ ಉದ್ಯಾನವನ ನಿರ್ಮಿಸಲಾಗಿದೆ. ಕಟ್ಟಡದ ಮುಂಬಾಗ ಧ್ವಜ ಸ್ಥಂಭ ನಿರ್ಮಿಸಿದ್ದು, ವಿಶೇಷವಾಗಿ ಸಿದ್ದಪಡಿಸಿದ ರಾಷ್ಟ್ರೀಯ ಲಾಂಛಾನ ಅಳವಡಿಸಲಾಗಿದೆ.

ವಿಶೇಷ ಚೇತನರಿಗೆ ಲ್ಯಾಂಪ್ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಮಹಿಳೆಯರ ಅನುಕೂಲತೆಗಾಗಿ ಮತ್ತು ಅವರ ಪುಟ್ಟ ಮಗುವಿನ ಆರೈಕೆಗಾಗಿ ಸರ್ಕಾರದ ಆದೇಶದ ಪ್ರಕಾರ “ಶಿಶುಪಾಲನಾ ಕೇಂದ್ರ” (ಕೂಸು ಮನೆ) ಸ್ಥಾಪಿಸಿದ್ದು, ಸದರಿ ಕೊಠಡಿಯಲ್ಲಿ ಪುಟ್ಟ ಮಕ್ಕಳ ಆರೈಕೆಗಾಗಿ ಎಲ್ಲಾ ಅನುಕೂಲತೆಗಳನ್ನು ಮಾಡಲಾಗಿದೆ.

ವಲಯ ಕಚೇರಿ-3ಕ್ಕೆ ಸಂಬಂಧಿಸಿದಂತೆ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಇಂಜಿನಿಯರಿಂಗ್ ವಿಭಾಗ, ಕಂಪ್ಯೂಟರ್ ವಿಭಾಗ ಸೇರಿದಂತೆ ಆಯಾಯ ಅಧಿಕಾರಿ / ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಸಂಪೂರ್ಣವಾಗಿ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಹಾಗೂ ಎಲ್ಲಾ ವಿಭಾಗಗಳು ಸೇರಿದಂತೆ ಸುಮಾರು 150 ಮಂದಿ ಸಿಬ್ಬಂದಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ ಸ್ಥಾಪಿಸಲಾಗಿದೆ. ಕಡತಗಳ ಸಂರಕ್ಷಣೆಗೆಗಾಗಿ ವ್ಯವಸ್ಥಿತವಾದ ಕಪಾಟುಗಳನ್ನು ಒಳಗೊಂಡ ದಾಖಲಾತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಮೊದಲ ಅಂತಸ್ತಿಗೆ ತೆರಳಲು ಅನುಕೂಲವಾಗುವಂತೆ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ.  ಸಾರ್ವಜನಿಕರ ವಾಹನ ನಿಲುಗಡೆಗೆ ವಿಶಾಲವಾದ ಸ್ಥಳವಕಾಶ ಲಭ್ಯವಿರುತ್ತದೆ. ಸುಮಾರು 60 ಮಂದಿ ಕುಳಿತು ಸಭೆ ಮಾಡುವಂತ ಸುಸಜ್ಜಿತವಾದ ಸಭಾಂಗಣ ನಿರ್ಮಿಸಲಾಗಿದೆ ಎಂದು ವಲಯ ಆಯುಕ್ತ ಸತ್ಯಮೂರ್ತಿ ಮಾಹಿತಿ ನೀಡಿದರು.

key words: The zonal office-3, Mysore, set to be inaugurated, Chief Minister Siddaramaiah

SUMMARY:

The zonal office-3 is set to be inaugurated by Chief Minister Siddaramaiah on April 26. A new well-equipped building has been prepared to serve the public better. About one-and-a-half acres of land, The building has been constructed at a cost of Rs 6.5 crore. Zonal Commissioner Sathyamurthy told.