ಬೆಂಗಳೂರು,ಫೆಬ್ರವರಿ,18,2025 (www.justkannada.in): ಮೂರು ವರ್ಷಗಳಾದರೂ ನಡೆಯದೇ ಇರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.
ಮೇ ತಿಂಗಳ ಬಳಿಕ ಅಂದರೆ ಜೂನ್ ತಿಂಗಳಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ನಡೆಯೋದು ಬಹುತೇಕ ಖಚಿತವಾಗಿದೆ. ಮೇ ತಿಂಗಳ ಅಂತ್ಯದೊಳಗೆ ಚುನಾವಣಾ ಆಯೋಗಕ್ಕೆ ಸರ್ಕಾರ ಮೀಸಲಾತಿ ಪಟ್ಟಿ ಸಲ್ಲಿಸಲಿದ್ದು, ಈ ಬಗ್ಗೆನಿನ್ನೆ ಹೈಕೋರ್ಟ್ ಗೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ
ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನ ನಿನ್ನೆ ಹೈಕೋರ್ಟ್ ನಡೆಸಿತ್ತು. ಸರ್ಕಾರ ಮೀಸಲಾತಿ ಪಟ್ಟಿ ಕೊಟ್ಟರೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಪರ ವಕೀಲ ಪಣೀಂದ್ರ ಹೈಕೋರ್ಟ್ ಗೆ ತಿಳಿಸಿದ್ದರು.
ಈ ವೇಳೆ ಮೇ ತಿಂಗಳ ಅಂತ್ಯದಲ್ಲಿ ಮೀಸಲಾತಿ ಪಟ್ಟಿ ನೀಡುತ್ತೇವೆ. ಮೇ ತಿಂಗಳ ಬಳಿಕ ಚುನಾವಣಾ ನಡೆಸುವುದಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಜೂನ್, ಜುಲೈನಲ್ಲಿ ಚುನಾವಣೆ ನಡೆಸುವ ಸಂಭವವಿದೆ.
ಸಿಎಂ ಸಿದ್ದರಾಮಯ್ಯ ಈಗಾಗಲೇ ಚುನಾವಣೆ ನಡೆಸಲು ಸಿದ್ದರಿದ್ದೇವೆ ಎಂದು ಹೇಳಿಕೆ ನೀಡಿದ್ದು, ಹಾಗಾದರೆ ಜೂನ್, ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಮತ್ತೊಂದು ಚುನಾವಣಾ ಕಾವು ರಂಗೇರಲಿದೆ.
Key words: ZP, TP elections, may, High court